ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣೆ; ಸನ್ಮಾನ, ಯಕ್ಷಗಾನ ಪ್ರದರ್ಶನ

ಬಂಟ್ವಾಳ: ಇರಾ-ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ವತಿಯಿಂದ ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಶ್ರೀ ಕಟೀಲು ಮೇಳದ ಹಿರಿಯ ಚೆಂಡೆ ವಾದಕರಾದ ಮೋಹನ ಶೆಟ್ಟಿಗಾರ್ ಮಿಜಾರು ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಜಗದೀಶ್ ಶೆಟ್ಟಿ ಇರಾಗುತ್ತು ಸಂಸ್ಮರಣೆ ಭಾಷಣ ಮಾಡಿದರು.

ಟ್ರಸ್ಟ್‌ ನ ಗೌರವಾಧ್ಯಕ್ಷ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷ ಜಯರಾಮ ಪೂಜಾರಿ ಸೂತ್ರಬೈಲು, ಕಾರ್ಯದರ್ಶಿ ಗಣೇಶ್ ಕೊಟ್ಟಾರಿ ಸಂಪಿಲ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ರೈ ಉಪಸ್ಥಿತರಿದ್ದರು.

ಬಳಿಕ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ 'ದಮಯಂತಿ ಪುನಃಸ್ವಯಂವರ' ಹಾಗೂ 'ಗದಾಯುದ್ಧ-ರಕ್ತರಾತ್ರಿ' ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Edited By : Nagesh Gaonkar
Kshetra Samachara

Kshetra Samachara

28/02/2021 10:54 am

Cinque Terre

7.95 K

Cinque Terre

0

ಸಂಬಂಧಿತ ಸುದ್ದಿ