ಮುಲ್ಕಿ: ಮುಲ್ಕಿಯ ಇತಿಹಾಸ ಪ್ರಸಿದ್ಧ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನೂತನ ಧ್ವಜಸ್ತಂಭದ ಭವ್ಯ ಮೆರವಣಿಗೆ ಕಿನ್ನಿಗೋಳಿ 'ಯುಗಪುರುಷ' ದಿಂದ ಎಸ್. ಕೋಡಿ ಮೂಲಕ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನಕ್ಕೆ ಆಗಮಿಸಿತು.
ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿ ಹಾಗೂ ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ಮುಲ್ಕಿ ಒಂಬತ್ತು ಮಾಗಣೆಯ ಇತಿಹಾಸ ಪ್ರಸಿದ್ಧ ಪುನರೂರು ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಪೂರ್ವಭಾವಿಯಾಗಿ ಮೆರವಣಿಗೆಯಲ್ಲಿ ನೂತನ ಧ್ವಜಸ್ತಂಭ ತರಲಾಗಿದೆ. ಪುನರೂರು ಗ್ರಾಮಸ್ಥರು ಹಾಗೂ ಮುಲ್ಕಿ ಸೀಮೆಯ ಭಕ್ತರು ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.
ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಮಾತನಾಡಿ, ದೇವಳದ ಜೀರ್ಣೋದ್ಧಾರಕ್ಕೆ ಭಕ್ತರು ಕರಸೇವೆಯ ಮೂಲಕ ಭಾಗಿಯಾಗಿದ್ದು, ಇಂದಿನ ಧ್ವಜಸ್ತಂಭ ಮೆರವಣಿಗೆಯೇ ಸಾಕ್ಷಿ ಎಂದರು.
ಈ ಸಂದರ್ಭ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಮತ್ತಿತರ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
16/02/2021 10:10 pm