ಕುಂದಾಪುರ ಪರಿಸರದಲ್ಲಿ ಸಾಕಷ್ಟು ಜನಪದ ಹಾಡುಗಳು ಮೌಖಿಕ ರೂಪದಲ್ಲಿ ಕಾಣಸಿಗುತ್ತದೆ. ಜನಪದ ಹಾಡುಗಳು ದೈವ-ದೇವರುಗಳ ಆರಾಧನೆ ಭಾಗವಾಗಿರುವುದರ ಜೊತೆಗೆ ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದೆ.
ಆಧುನಿಕತೆಯ ಭರಾಟೆಯಲ್ಲಿ ಅದೆಷ್ಟೋ ಜನಪದ ಹಾಡುಗಳು ನಶೀಸಿ ಹೊಗುತ್ತಿದ್ದರೂ ಅವುಗಳನ್ನು ಆರಾಧನೆಯ ನೆಲೆಯಲ್ಲಿ ಕಾಪಾಡಿಕೊಂಡು ಬರುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ.
ಆ ನಿಟ್ಟಿನಲ್ಲಿ ಕುಂದಾಪುರ ತಾಲೂಕಿನಲ್ಲಿ ಶ್ರೀ ರಾಮ ಭಜನಾ ಮಂಡಳಿ-ಬೀಜಾಡಿ-ಗೋಪಾಡಿ ಅಗ್ರ ಪಂಕ್ತಿಯಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರೂ ಅತೀಶಯೋಕ್ತಿಯಲ್ಲಾ. ಸಾಂಪ್ರದಾಯಿಕ ಭಜನೆ, ಕುಣಿತ ಭಜನೆ, ಕೋಲಾಟ, ಹೌಂದರಾಯನ ವಾಲ್ಗ, ಹೀಗೆ ವಿವಿಧ ಪ್ರಕಾರದ ಜನಪದ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವಲ್ಲಿ ಈ ಭಜನಾ ಮಂಡಳಿಯ ಸದಸ್ಯರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.
ದಿವಂಗತ ಭಜನೆ ರಾಮಣ್ಣನವರ ಪರಿಶ್ರಮ ಹಾಗೂ ಮಾರ್ಗದರ್ಶನ ಈ ಭಜನಾ ಮಂಡಳಿ ಮೇಲೆ ಅಪಾರ ಪ್ರಭಾವ ಬೀರಿದೆ. ಆ ನಿಟ್ಟಿನಲ್ಲಿ ಪ್ರಸ್ತುತ ಶ್ರೀ ರಾಮ ಭಜನಾ ಮಂಡಳಿ ಬೀಜಾಡಿ-ಗೋಪಾಡಿ ಇದರ ಸದಸ್ಯರು ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ.
ಇತ್ತೀಚೆಗೆ ಕುಂದಾಪುರ ತಾಲೂಕಿನ ಗೋಪಾಡಿ ಶ್ರೀ ಚಿಕ್ಕು ಅಮ್ಮನವರ ಪರಿವಾರ ದೈವಸ್ಥಾನದ ಜಾತ್ರೆ ಪ್ರಯುಕ್ತ ಶ್ರೀ ರಾಮ ಭಜನಾ ಮಂಡಳಿ ಬೀಜಾಡಿ-ಗೋಪಾಡಿಯವರು ಪ್ರಸ್ತುತ ಪಡಿಸಿದ ಜನಪದ ಕಲೆಯ ವಿಡಿಯೋ ತುಣುಕು ನಿಮ್ಮ ಮುಂದೆ.
Kshetra Samachara
15/02/2021 08:44 pm