ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲಕಾಡಿ: ಆಯುಷ್ಮಾನ್ ಆರೋಗ್ಯ ಕಾರ್ಡ್ ಉಚಿತ ನೋಂದಣಿ ಸಮಾರೋಪ ಸಾಧಕರಿಗೆ ಸನ್ಮಾನ

ಮುಲ್ಕಿ: ಜನಸೇವಾ ಪರಿಷತ್ ಕೊಲಕಾಡಿ, ಅತಿಕಾರಿಬೆಟ್ಟು ವತಿಯಿಂದ ಉಚಿತ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಕಾರ್ಯಕ್ರಮದ ಸಮಾರೋಪ ಕೊಲಕಾಡಿ ಶ್ರೀ ಸಾಯಿಬಾಬಾ ಮಂದಿರದಲ್ಲಿ ನಡೆಯಿತು.

ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕೃಷಿಕರಾದ ರಾಮದಾಸ ಶೆಟ್ಟಿ ಬಾಳಿಕೆ ಮನೆ ಪುತ್ತೂರು ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಯುವ ಸಂಘಟನೆಯ ಮುಖಾಂತರ ಕೊಲಕಾಡಿ ಜನಸೇವಾ ಪರಿಷತ್ ನ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ವಕೀಲರಾದ ಪ್ರಶಾಂತ ಆಚಾರ್ಯ ಮಂಗಳೂರು, ಪುನರೂರು ಪ್ರತಿಷ್ಠಾನ (ರಿ)ನ ಅಧ್ಯಕ್ಷರಾದ ದೇವಪ್ರಸಾದ್ ಪುನರೂರು, ಕಾಪು ಪುರಸಭೆಯ ಮಾಲತಿ ಎನ್. ಸುವರ್ಣ, ಜನಸೇವಾ ಪರಿಷತ್ ನ ಅಧ್ಯಕ್ಷರಾದ ಅನಿಲ್ ಕೊಲಕಾಡಿ,ಗೌರವಾಧ್ಯಕ್ಷರಾದ ಗಂಗಾಧರ ಶೆಟ್ಟಿ ಬರ್ಕೆ ತೋಟ, ಸಲಹೆಗಾರರಾದ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಶ್ರೀಕಾಂತ್ ಭಟ್ ಕೊಲಕಾಡಿ, ಅಚ್ಚುತ ಆಚಾರ್ಯ ಕೊಲಕಾಡಿ, ಶ್ರೀಪತಿ ಭಟ್ ಪರಂಕಿಲ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ್ ಕೊಲಕಾಡಿ, ಪಂಜಿನಡ್ಕ ಕೆಪಿಎಸ್ ಕೆ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನಾಗಭೂಷಣ ರಾವ್ ರವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು. ಜಯಶ್ರೀ ಶ್ರೀಧರ ಕೋಟ್ಯಾನ್ ಸ್ವಾಗತಿಸಿದರು. ಪ್ರಶಾಂತ ಆಚಾರ್ಯ ಉಪ್ಪಿ ಕಲ ಕಾರ್ಯಕ್ರಮ ನಿರೂಪಿಸಿದರು. ಸುಮಾರು 500ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಉಚಿತ ಆಯುಷ್ಮಾನ್ ಕಾರ್ಡ್ ಕಾರ್ಯಕ್ರಮದ ಪ್ರಯೋಜನ ಪಡೆದರು.

Edited By : Manjunath H D
Kshetra Samachara

Kshetra Samachara

01/02/2021 12:39 pm

Cinque Terre

24.94 K

Cinque Terre

0

ಸಂಬಂಧಿತ ಸುದ್ದಿ