ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಪ್ಪನಾಡಿನಲ್ಲಿ 'ವಿವೇಕ ಕಾಯಕ ರತ್ನ' ಪ್ರಶಸ್ತಿ ಪ್ರದಾನ

ಮುಲ್ಕಿ: ಸ್ವಾಮಿ ವಿವೇಕಾನಂದರ 158ನೇ ಜಯಂತ್ಯುತ್ಸವದ ಪ್ರಯುಕ್ತ ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ವಿವೇಕ ಕಾಯಕರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶ್ರೀ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ನಡೆಯಿತು.

ಸಂಸ್ಥೆಯ ಅಧ್ಯಕ್ಷ ಡಾ. ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿಮನೆ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮೂಡುಬಿದಿರೆ ಜೈನ ಮಠದ ಶ್ರೀ ಭಾರತ ಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವಾಮಿ ವಿವೇಕಾನಂದರು ಧರ್ಮ ಯೋಗ, ಕರ್ಮ ಯೋಗ, ಭಕ್ತಿಯೋಗ ಜ್ಞಾನಯೋಗದ ಮೂಲಕ ಎಲ್ಲ ರಂಗಗಳ ಸಾಧಕರಾಗಿದ್ದರು. ಅವರು ಸಂಸ್ಕೃತಿ ಹಾಗೂ ಸಂಸ್ಕಾರದ ಪ್ರತೀಕವಾಗಿದ್ದರು ಎಂದರು.

ಮುಲ್ಕಿ ಸೀಮೆ ಅರಸರಾದ ಎಂ.ದುಗ್ಗಣ್ಣ ಸಾವಂತರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿವೇಕಾನಂದರು ಯುಗ ಪುರುಷರಾಗಿದ್ದು, ಅವರ ಆದರ್ಶಗಳನ್ನು ಇಂದಿನ ಯುವಜನಾಂಗಕ್ಕೆ ತಿಳಿಸುತ್ತಿರುವ ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯ ಎಂದರು.

ಆರೆಸ್ಸೆಸ್ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸುನಿಲ್ ಕುಲಕರ್ಣಿ ಮಾತನಾಡಿ, ವಿವೇಕಾನಂದರ ಆದರ್ಶ ಇಂದಿಗೂ ಪ್ರಸ್ತುತವಾಗಿದ್ದು, ಯುವಕರ ಕಣ್ಮಣಿಯಾಗಿದ್ದರು ಎಂದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು,ತೋಕೂರು ಎಂ.ಆರ್.ಪೂಂಜ ಐಟಿಐ ನಿವೃತ್ತ ಪ್ರಾಂಶುಪಾಲ ವೈ.ಎನ್. ಸಾಲ್ಯಾನ್, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಎಸ್. ಮನೋಹರ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ, ಮುಲ್ಕಿ ಮೂಡುಬಿದಿರೆ ಮಂಡಲ ಬಿಜೆಪಿ ಅಧ್ಯಕ್ಷ ಸುನಿಲ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಸಂಸ್ಥೆ ವತಿಯಿಂದಪ್ರಸ್ತುತ ವರ್ಷದಲ್ಲಿ ವಿವೇಕ ಕಾಯಕ ರತ್ನ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸಾಧಕರಾಗಿರುವ ಉಮಾನಾಥ ದೇವಾಡಿಗ ಅಶ್ವತ್ಥಪುರ, ಶೇಖರ ಐಕಳ, ಹೆರಾಲ್ಡ್ ರೋಶನ್ ಪಿಂಟೋ ಕಿನ್ನಿಗೋಳಿ, ದಿನೇಶ್ ಸಾಲ್ಯಾನ್ ಶಿಬರೂರು, ರತ್ನಾರಾವ್ ಕವತ್ತಾರು, ನಾಯಕ್ ಭಾಸ್ಕರ ರೈ ಕಾಟಿಪಳ್ಳ, ಶಂಕರ ಕೆಮ್ಮಡೆ, ಗಣೇಶ್ ದೇವಾಡಿಗ ಕವತ್ತಾರು, ಲೀಲಾ ಶೆಟ್ಟಿಗಾರ್ ಕೆಂಚನಕೆರೆ, ಸುಂದರ ಪೂಜಾರಿ ಕಲ್ಲಮುಂಡ್ಕೂರು, ಗೋಪಾಲ ಐಕಳ, ವಿಜಯಕುಮಾರ್ ಕಾರ್ನಾಡ್, ಶೇಖರ ಪೂಜಾರಿ ಕೊಲ್ಲೂರು, ಅಶೋಕ ಭಂಡಾರಿ ಅತಿಕಾರಿಬೆಟ್ಟು, ಲಕ್ಷ್ಮಣ ಅತ್ತಾಯಿಜಿಡ್ಡು ಬಳ್ಳುಂಜೆ, ಕೃಷ್ಣ ಅಚಾರ್ ಕಲ್ಲಮುಂಡ್ಕೂರು, ಸೀತಾರಾಮ ಶೆಟ್ಟಿ ಎಳತ್ತೂರು, ಆನಂದ ಕೊಲ್ಲೂರು, ಜಯರಾಂ ಆಚಾರ್ ಮುಲ್ಕಿ, ಜಯರಾಮ್ ಆಚಾರ್ಯ ಅಂಗರಗುಡ್ಡೆ, ಶಂಕರ ಕುಲಾಲ್ ಕಿಲ್ಪಾಡಿ, ಭಾಸ್ಕರ ಕೆರೆಕಾಡು, ವನಜ ಪಿ. ಕೋಟ್ಯಾನ್ ಹಾಗೂ ಅತ್ಯುತ್ತಮ ಸೇವಾ ಸಂಸ್ಥೆಯಾಗಿ ಏಳಿಂಜೆಯ ನವಚೇತನ ಯುವಕ ಮತ್ತು ಯುವತಿ ಮಂಡಳಿಯನ್ನು ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಮಿಮಿಕ್ರಿ ಕಲಾವಿದ, ಚಿತ್ರನಟ ಶರಣ್ ಕೈಕಂಬ, ಚಂದ್ರಕಾಂತ ಪಡುಬಿದ್ರಿ, ಪ್ರಕಾಶ್ ಆಚಾರ್ಯ ಕಿನ್ನಿಗೊಳಿ ಅವರಿಂದ ವಿಶೇಷ ಕಾರ್ಯಕ್ರಮ ನಡೆಯಿತು. ಸಂಸ್ಥೆ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ಸ್ವಾಗತಿಸಿದರು. ಶರತ್ ಶೆಟ್ಟಿ ನಿರೂಪಿಸಿದರು. ಶ್ರೀಶ ಸರಾಫ್ ಐಕಳ ವಂದಿಸಿದರು.

Edited By : Nagesh Gaonkar
Kshetra Samachara

Kshetra Samachara

31/01/2021 09:22 pm

Cinque Terre

18.14 K

Cinque Terre

0

ಸಂಬಂಧಿತ ಸುದ್ದಿ