ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೀಲಾವರ ಗೋ ಶಾಲೆಗಾಗಿ ಮೇವು ಕಟಾವು; ಸಾಥ್ ನೀಡಿದ ಫಲಿಮಾರು ಶ್ರೀಗಳು

ಉಡುಪಿ: ನೀಲಾವರ ಗೋಶಾಲೆಗೆ ಉಚಿತವಾಗಿ ಗೋ‌ ಮೇವು ಒದಗಿಸುವ ಕಾರ್ಯಕ್ಕೆ ಫಲಿಮಾರು ಶ್ರೀಗಳು ಸಾಥ್ ನೀಡಿದ್ದಾರೆ.

ಕೆಲ ವರ್ಷಗಳಿಂದ ಕುಂಜಾರುಗಿರಿಯ ಸುದರ್ಶನ್ ಅವರು ತಮ್ಮ ಒಂದು ಎಕರೆ ಗದ್ದೆಯಲ್ಲಿ ಜೋಳ ಬೆಳೆದು ಅದನ್ನು ನೀಲಾವರ ಗೋ ಶಾಲೆಗೆ ನೀಡುತ್ತಿದ್ದರು. ಕಟಾವು ಸಂದರ್ಭ ಊರಿನ ಸಾರ್ವಜನಿಕರು, ವಿದ್ಯಾರ್ಥಿಗಳು ಕೈಜೋಡಿಸಿ ಮೇವು ಹಸ್ತಾಂತರಿಸುತ್ತಿದ್ದರು. ಈ ಬಾರಿ ಕೊರೊನಾ ಕಾರಣದಿಂದಾಗಿ ಮನೆ ಮಂದಿ ಮತ್ತು ಸ್ಥಳೀಯರು ಸೇರಿ ಕಟಾವು ನಡೆಸಿದರು. ಪೇಜಾವರ ಶ್ರೀಗಳು ಪ್ರತೀ ವರ್ಷ ಈ ಕಾರ್ಯಕ್ಕೆ ಸಹಕರಿಸಿ ಕಟಾವು ಸಂದರ್ಭ ಬರುತ್ತಿದ್ದರು.

ಈ ಬಾರಿ ಫಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಸ್ಥಳೀಯರ ಜೊತೆ ಸೇರಿ ಕಟಾವು ನಡೆಸಿದರು.

Edited By : Nagesh Gaonkar
Kshetra Samachara

Kshetra Samachara

20/01/2021 06:19 pm

Cinque Terre

22.25 K

Cinque Terre

2

ಸಂಬಂಧಿತ ಸುದ್ದಿ