ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಪ್ಪನಾಡು ದೇವಸ್ಥಾನದಲ್ಲಿ 'ಮೂಡುವಲು' ಉತ್ಸವ ಸಂಭ್ರಮ

ಮುಲ್ಕಿ: ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೂಡುವಲು ಉತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಶ್ರೀ ಗಣಪತಿ ದೇವರಿಗೆ ಕಲಶಾಭಿಷೇಕ ಮತ್ತು 48 ತೆಂಗಿನ ಕಾಯಿ ಗಣಹೋಮ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಬಳಿಕ ದೇವರಿಗೆ ಒಂದು ಕ್ವಿಂಟಾಲ್ ಅಕ್ಕಿಯ ಅಪ್ಪ ಸಮರ್ಪಣೆ ನಡೆಯಿತು. ಸಂಪ್ರದಾಯದ ಪ್ರಕಾರ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತ ಅವರನ್ನು ವಿಶೇಷವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಮಾತನಾಡಿ, ದೇವಳದಲ್ಲಿ ಗಣಪತಿ ದೇವರ ಪ್ರತಿಷ್ಠೆಯ ದಿನವಾಗಿದ್ದು "ಮೂಡುವಲು ಉತ್ಸವ"ಎಂದು ಆಚರಿಸಲಾಗುತ್ತಿದೆ ಎಂದರು. ಮಹಾಪೂಜೆ ನಡೆದು ಬಲಿ ಉತ್ಸವ, ಪೂಜೆ ನಂತರ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭ ಅರ್ಚಕ ಶ್ರೀಪತಿ ಉಪಾಧ್ಯಾಯ, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ದೇವಳದ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಸುನಿಲ್ ಆಳ್ವ, ಸತೀಶ್ ಭಂಡಾರಿ, ಅತುಲ್ ಕುಡ್ವ, ಚಂದ್ರಶೇಖರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಇಂದು ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಳಕ್ಕೆ ಭೇಟಿ ನೀಡಿ ಅಪ್ಪ ಪ್ರಸಾದ ಸ್ವೀಕರಿಸಿದರು.

Edited By : Nagesh Gaonkar
Kshetra Samachara

Kshetra Samachara

17/01/2021 06:15 pm

Cinque Terre

7.02 K

Cinque Terre

0

ಸಂಬಂಧಿತ ಸುದ್ದಿ