ವರದಿ : ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ.
ತೀರ್ಥಹಳ್ಳಿ: ಮಕರ ಸಂಕ್ರಾಂತಿಯ ಹಬ್ಬದ ವಿಶೇಷ ಆಚರಣೆ ದೇಶದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಆದರೆ ಕರ್ನಾಟಕದಲ್ಲಿ ಕರ್ನಾಟಕದ ಶಬರಿಮಲೆ ಎಂದೇ ಪ್ರಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಯಲ್ಲಿ ಮಕರ ಸಂಕ್ರಾಂತಿಯ ಹಬ್ಬದ ಆಚರಣೆಯೇ ಬಲು ವಿಶೇಷವಾಗಿದೆ. ಕಲಿಯುಗವಾಸಃ, ಹರಿಹರಸಾನ, ಸ್ವಾಮಿ ಅಯ್ಯಪ್ಪನ ದರ್ಶನಕ್ಕಾಗಿ ಸಾವಿರಾರು ಭಕ್ತರ ದಂಡು ಹರಿದು ಬಂದಿದೆ.
ಶ್ರೀ ಶ್ರೀ ಶ್ರೀ. ಡಾ!! ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರುಗಳು ಬಾರ್ಕೂರು ಮಹಾಸಂಸ್ಥನ ಸಲಹೆ ಮಾರ್ಗದರ್ಶನದಲ್ಲಿ ನಡೆದ ಅಯ್ಯಪ್ಪನ ಪಲ್ಲಕ್ಕಿ ಉತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿ ಕಣ್ತುಂಬಿಕೊಂಡರು. ಶಬರಿಮಲೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಯಾವ ರೀತಿಯಾಗಿ ಪಲ್ಲಕ್ಕಿ ಉತ್ಸವ ಪೂಜೆಗಳು ನಡೆಯುತ್ತದೆ, ಅದೇ ರೀತಿ ಬೆಜ್ಜವಳ್ಳಿ ಅಯ್ಯಪ್ಪಸ್ವಾಮಿ ಮಂದಿರದಲ್ಲಿ ನಡೆಯುತ್ತಿದೆ.
ಅಯ್ಯಪ್ಪ ಸ್ವಾಮಿಯ ಗಣಗಳನ್ನು ಹೊತ್ತು ಬರುವ ಪಲ್ಲಕ್ಕಿ ಮತ್ತು ಸ್ವಾಮಿ ಧರಿಸುವ ಆಭರಣಗಳನ್ನು ಕಾಯುತ್ತಿರುವ ಗರುಡಪಕ್ಷಿ ಮೂರುಬಾರಿ ಬಾರಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುವುದನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರ ಪ್ರತಿವರ್ಷ ಹರಿದುಬರುತ್ತದೆ. ನೆರೆದಿರುವ ಭಕ್ತರು ಪಲ್ಲಕ್ಕಿಯನ್ನು ಮುಟ್ಟಿ ನಮಸ್ಕರಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ದೇವರ ಮೊರೆಹೋಗುತ್ತಾರೆ. ಮುಂದಿನ ಸಲ ಮಕರ ಸಂಕ್ರಾಂತಿ ಬರುವಷ್ಟರಲ್ಲಿ ಅವರ ಇಷ್ಟಾರ್ಥಗಳು ಈಡೇರುತ್ತದೆ ಎಂಬ ದೃಢವಾದ ನಂಬಿಕೆ ಇದೆ.
Kshetra Samachara
15/01/2021 06:15 pm