ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕರ್ನಾಟಕ ಸಿಂಗಾರಿ ಮೇಳ ರಚಿಸಲು ನಿರ್ಧಾರ

ಮಂಗಳೂರು: ಕರ್ನಾಟಕ ಸಿಂಗಾರಿ ಮೇಳ ಅಕಾಡೆಮಿಯ ಸ್ಥಾಪನ ಕಾರ್ಯಕ್ರಮ ನಗರದ ಪಾಂಡೇಶ್ವರ ಪೋಲಿಸ್ ಲೈನ್ ನಲ್ಲಿರುವ ಮುನೇಶ್ವರ ಮಹಾಗಣಪತಿ ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು,ಮೋಹನದಾಸ ಕೊಟ್ಟಾರಿ ಮುನ್ನೂರು ಇವರ ಮಾರ್ಗದರ್ಶನದಲ್ಲಿ ಕರ್ನಾಟಕ ಸಿಂಗಾರಿ ಮೇಳ ಅಕಾಡೆಮಿ ರಚಿಸಲಾಯಿತು.

ಈ ವೇಳೆ ಒಟ್ಟು 34 ಚೆಂಡೆ ತಂಡದ ಮುಖ್ಯಸ್ಥರು ಈ ಸಭೆಯಲ್ಲಿ ಭಾಗವಹಿಸಿದ್ದರು, ಕರ್ನಾಟಕ ಸಿಂಗಾರಿ ಮೇಳದ ಗೌರವಧ್ಯಕ್ಷರಾಗಿ ಮೋಹನ್ ದಾಸ ಕೊಟ್ಟಾರಿ ಮೂನ್ನೂರು ಅಯ್ಕೆಗೊಂಡರು,ಕರ್ನಾಟಕ ಸಿಂಗಾರಿ ಮೇಳದ ಅಧ್ಯಕ್ಷರಾಗಿ ಸುದೀಪ್ ಮುಲ್ಲಕಾಡು, ಉಪಾಧ್ಯಕ್ಷರಾಗಿ ಗಣೇಶ್ ಕುಲಶೇಖರ್,

ಪ್ರಧಾನ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಮೂಡಬಿದ್ರೆ,ಗೌರವ ಸಲಹೆಗಾರರಾಗಿಕಿರಣ್ ಕಟೀಲ್ ನಾಮ್ ದೇವ್ ಅಡ್ಯಾರ್ ಪದವು ನಿತಿನ್ ಕಟಪಾಡಿ ಜೊತೆ ಕಾರ್ಯದರ್ಶಿ ಹಾಗೂ ಖಜಾಂಚಿ - ಹಿತೇಶ್ ಪೆರ್ಮಂಕಿ ಅವರನ್ನು ಅಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅನೇಕ ಮಂದಿ ಸದಸ್ಯರು ಭಾಗವಹಿಸಿದ್ದರು.

Edited By : Manjunath H D
Kshetra Samachara

Kshetra Samachara

05/01/2021 07:39 am

Cinque Terre

17.56 K

Cinque Terre

1

ಸಂಬಂಧಿತ ಸುದ್ದಿ