ಮುಲ್ಕಿ: ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವ ಇಂದು ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ ನಡೆಯಿತು.
ಬೆಳಿಗ್ಗೆ 8ಕ್ಕೆ ಮಹಾ ಪ್ರಾರ್ಥನೆ, ಮಧ್ಯಾಹ್ನ ಶ್ರೀ ಉಗ್ರ ನರಸಿಂಹ ದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಸೀಯಾಳ ಅಭಿಷೇಕ ಜರುಗಿತು.
ಮಧ್ಯಾಹ್ನ ಶ್ರೀ ದೇವರಿಗೆ ಕನಕಾಭಿಷೇಕ, ಗಂಗಾ ಭಾಗೀರಥಿ ಅಭಿಷೇಕ ನಡೆಯಿತು.
ಈ ಸಂದರ್ಭ ದೇವಳ ಟ್ರಸ್ಟಿ ದಾಮೋದರ ಕುಡ್ವ ಮಾತನಾಡಿ, ಇತಿಹಾಸ ಪ್ರಸಿದ್ಧ ಮುಲ್ಕಿ ಶ್ರೀ ಒಳಲಂಕೆ ವೆಂಕಟ್ರಮಣ ದೇವರಿಗೆ ಸಂಭ್ರಮದ ಪ್ರತಿಷ್ಠಾ ಮಹೋತ್ಸವ ಸರಳ ರೀತಿಯಲ್ಲಿ ನಡೆದಿದ್ದು, ದೇವರ ಅಭಿಷೇಕಕ್ಕೆ25,000ಕ್ಕೂ ಮಿಕ್ಕಿ ಹರಕೆ ರೂಪದಲ್ಲಿ ಸೀಯಾಳ ಬಂದಿದ್ದು, ಅಭಿಷೇಕ ನಡೆಸಲಾಗಿದೆ. ಉತ್ಸವಕ್ಕೆ ಬರುವ ಭಕ್ತಾದಿಗಳಿಗೆ ಉಚಿತ ರಿಕ್ಷಾ ವ್ಯವಸ್ಥೆ ಮಾಡಲಾಗಿದೆ.
ದೇವಳದಲ್ಲಿ ಸಾಯಂಕಾಲ ಮಹಾನೈವೇದ್ಯ ಮಂಗಳಾರತಿ, ಅನ್ನಪ್ರಸಾದ, ರಾತ್ರಿ ಪೂಜೆ, ದೀಪಾರಾಧನೆ, ರಥೋತ್ಸವ, ವಿಶ್ರಾಂತಿ ಪೂಜೆ, ಸ್ವರ್ಣಗರುಡ ಸಹಿತ ರಜತರಥ ಉತ್ಸವ, ದೇವದರ್ಶನದಲ್ಲಿ ಅಭಯಪ್ರಸಾದ, ನಿತ್ಯೋತ್ಸವ ಚಂದ್ರಮಂಡಲ ಉತ್ಸವ, ವಸಂತ ಪೂಜೆ ನಡೆಯಲಿದ್ದು, ಭಕ್ತರೆಲ್ಲ ಕೊರೊನಾ ನಿಯಮ ಪಾಲಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿಸಿದ್ದಾರೆ.
Kshetra Samachara
30/12/2020 02:58 pm