ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಐತಿಹಾಸಿಕ ಹಿರಿಮೆಯ ಅರಸು ಕಂಬಳ ಸಂಪನ್ನ; ಬಹುಮಾನ ವಿತರಣೆ, ಗೌರವಾರ್ಪಣೆ

ಮುಲ್ಕಿ: ಕೊರೊನಾ ಮಹಾಮಾರಿಯಿಂದಾಗಿ ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಅರಸು ಕಂಬಳ ಸರಳ, ಸಾಂಪ್ರದಾಯಿಕವಾಗಿ ನಡೆದು ಭಾನುವಾರ ಸಂಜೆ ಸಮಾರೋಪಗೊಂಡಿತು.

ಸಮಾರಂಭದಲ್ಲಿ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿದವರನ್ನು ಗೌರವಿಸಿ ಮಾತನಾಡಿ,

ಈ ಬಾರಿಯ ಅರಸು ಕಂಬಳ ಸರಳ ರೀತಿಯಲ್ಲಿ ನಡೆದಿದ್ದು,ಸಹಕಾರ ನೀಡಿದ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಗ್ರಾಮಸ್ಥರಿಗೆ, ಆರಕ್ಷಕ ಸಿಬ್ಬಂದಿಗೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿ,

ಕೊರೊನಾದಿಂದ ವಿಶ್ವ ಶೀಘ್ರ ಮುಕ್ತವಾಗಲಿ ಎಂದರು. ಸ್ಪರ್ಧೆಯಲ್ಲಿ ಒಟ್ಟು 47 ಕೋಣಗಳು ಭಾಗವಹಿಸಿದ್ದು, ಹಗ್ಗ ಕಿರಿಯ ಸ್ಪರ್ಧೆಯಲ್ಲಿ ಮುಲ್ಕಿ ಪಯ್ಯೊಟ್ಟು ಸದಾಶಿವ ಸಾಲ್ಯಾನ್(ಪ್ರಥಮ),

ಕೋಣ ಓಡಿಸಿದವರು ವಾಲ್ಪಾಡಿ ಶಂಕರ್. ಜಪ್ಪು ಮಂಕು ತೋಟಗುತ್ತು ಸಾಚಿ ಅನಿಲ್ ಶೆಟ್ಟಿ ಎ. ( ದ್ವಿತೀಯ), ಕೋಣ ಓಡಿಸಿದವರು ಹಿರೇಬೆಟ್ಟು ಆಕಾಶ್.

ನೇಗಿಲು ಕಿರಿಯ ವಿಭಾಗದಲ್ಲಿ ಕಾರಿಂಜೆ ಕೊಂಬೇಲುಗುತ್ತು ಪ್ರಶಾಂತ ಪೂಜಾರಿ ( ಪ್ರಥಮ), ಕೋಣ ಓಡಿಸಿದವರು ಅರುಣ್ ಕುಮಾರ್. ಕಣಕೂರು ಇಬ್ರಾಹಿಂ ಸಾಹೇಬ್ ( ದ್ವಿತೀಯ), ಕೋಣ ಓಡಿಸಿದವರು ಬೈಂದೂರು ವಿಶ್ವನಾಥ ದೇವಾಡಿಗ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ವೇದಿಕೆಯಲ್ಲಿ ಕಂಬಳ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯಕ್ ಕೊಲ್ನಾಡುಗುತ್ತು, ಪದಾಧಿಕಾರಿಗಳಾದ ಶಶೀಂದ್ರ ಸಾಲಿಯಾನ್ ಪಯ್ಯೊಟ್ಟು, ಗೌತಮ್ ಜೈನ್ ಮುಲ್ಕಿ ಅರಮನೆ, ಚಂದ್ರಶೇಖರ ನಾನಿಲ್, ವಕೀಲ ಚಂದ್ರಶೇಖರ್, ದಿನೇಶ್ ಸುವರ್ಣ, ಉಮೇಶ್ ಪಡುಪಣಂಬೂರು,

ಶ್ಯಾಮ್ ಪಡುಪಣಂಬೂರು, ಅಬ್ದುಲ್ ರಜಾಕ್ ಮುಲ್ಕಿ, ಮನ್ಸೂರ್ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.

Edited By : Manjunath H D
Kshetra Samachara

Kshetra Samachara

27/12/2020 08:05 pm

Cinque Terre

22.79 K

Cinque Terre

0

ಸಂಬಂಧಿತ ಸುದ್ದಿ