ಉಚ್ಚಿಲ: ಇತಿಹಾಸ ಪ್ರಸಿದ್ಧ ಉಚ್ಚಿಲ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಸಾರ್ವಜನಿಕ ಅಪ್ಪ ಪೂಜಾ ಸೇವೆ ಜರಗಿತು.
ಪ್ರತಿ ದೇವರಿಗೆ ಒಂದೊಂದು ಪ್ರಿಯ ವಸ್ತು ಸಮರ್ಪಿಸಿದರೆ ದೇವರು ಕೃತಾರ್ಥರಾಗುತ್ತಾರೆ ಎಂಬ ಪ್ರತೀತಿ ಇದೆ. ಅದೇ ರೀತಿ ಮಹಾಗಣಪತಿಗೆ ಅಪ್ಪ ಕಡುಬು, ಕಬ್ಬು ಮತ್ತಿತರ ತಿಂಡಿ ಸಮರ್ಪಿಸಿದರೆ ಇಷ್ಟಾರ್ಥ ಸಿದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ. ಆ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕಳೆದ 5 ವರ್ಷಗಳಿಂದ ಸಾರ್ವಜನಿಕ ಅಪ್ಪ ಸೇವೆ ಮಾಡಲಾಗುತ್ತಿದೆ.
ಮೊದಲಿಗೆ 200ರಿಂದ 300 ಅಪ್ಪ ಸೇವೆ ಹರಕೆ ರೂಪದಲ್ಲಿ ಬರುತ್ತಿದ್ದರೆ, ಈಗ ಸಾವಿರಕ್ಕೂ ಅಧಿಕ ಅಪ್ಪ ಸೇವೆ ಬರುತ್ತಿದೆ.
ಈ ಸಂದರ್ಭ ದೇವಳದ ಅಡಳಿತ ಮಂಡಳಿ ಅಧ್ಯಕ್ಷ ಧ್ಯುಮಣಿ ಆರ್. ಭಟ್, ರಾಘವೇಂದ್ರ ಭಟ್, ಗೋವಿಂದ ರಾಜ್ ಭಟ್, ದೇವಳದ ಪ್ರಧಾನ ಅರ್ಚಕ ಸೀತಾರಾಮ ಭಟ್, ರಾಘವೇಂದ್ರ ಉಪಾಧ್ಯಾಯ, ವಿಷ್ಣು ಮೂರ್ತಿ ಉಪಾಧ್ಯಾಯ, ಜಿಪಂ ಸದಸ್ಯೆ ಶಿಲ್ಪಾ ಜಿ. ಸುವರ್ಣ, ಗಂಗಾಧರ ಸುವರ್ಣ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
Kshetra Samachara
29/09/2020 05:49 pm