ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಹಿಂದೂ ಸಂಪ್ರದಾಯದ ತೆನೆ ಹಬ್ಬಕ್ಕೆ ಭತ್ತವನ್ನು ಬೆಳೆಸಿ ದೇವಸ್ಥಾನಕ್ಕೆ ಉಚಿತವಾಗಿ ನೀಡುತ್ತಿದೆ

ಬ್ರಹ್ಮಾವರ: ನಗರೀಕರಣ ಸಂಪ್ರದಾಯ ಆಚರಣೆಗೆ ತೊಡಕಾಗ ಬಾರದು ಎನ್ನುವ ಹಿನ್ನೆಲೆಯಲ್ಲಿ ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗ 6 ವರ್ಷದಿಂದ ವಿನೂಥನ ಕಾರ್ಯಕ್ರಮ ಮಾಡುತ್ತಿದೆ. ಇಲ್ಲಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ನವರಾತ್ರಿಯಂದು ತೆನೆ ಹಬ್ಬದ ಆಚರಣೆಯನ್ನು ಮಾಡಲಾಗುತ್ತಿದೆ.

ಭತ್ತ ಬೆಳೆಯು ಗದ್ದೆಗಳಲ್ಲಿ ಮನೆಗಳಾಗಿ ನಗರ ಭಾಗದಲ್ಲಿ ಬಹು ಮಹಡಿಯ ಕಟ್ಟಡಗಳಾದ ಕಾರಣ ಭತ್ತದ ಬೇಸಾಯ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ತೆನೆ ಹಬ್ಬಕ್ಕೆ ಇಲ್ಲಿನ ಗೆಳೆಯರ ಬಳಗ ದೇವಸ್ಥಾನ ಬಳಿಯಲ್ಲಿ ಇರುವ ಬಳಗದ ಸದಸ್ಯರೊಬ್ಬರ ಅರ್ಧ ಎಕರೆಯ 3 ಗದ್ದೆಯಲ್ಲಿ ಸದಸ್ಯರೆ ಸೇರಿ ಭತ್ತವನ್ನು ಬೆಳೆದು ತೆನೆಯನ್ನು ದೇವಸ್ಥಾನಕ್ಕೆ ನೀಡುತ್ತಾರೆ.

ಸದಸ್ಯರೆ ಕಟಾವು ಮಾಡಿದ ತೆನೆಯನ್ನು ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಭಟ್ ಪೂಜೆ ಮಾಡಿ ವಾದ್ಯ ಘೋಷದೊಂದಿಗೆ ದೇವಸ್ಥಾನಕ್ಕೆ ತರಲಾಗುತ್ತದೆ . ಪ್ರಥಮ ನವರಾತ್ರಿಯಂದು ತೆನೆ ಹಬ್ಬವನ್ನು ಆಚರಿಸುವ ಇಲ್ಲಿನ ಪರಿಸರದ 2 ಸಾವಿರ ಮಂದಿ ದೇವಸ್ಥಾನದಿಂದ ತೆನೆಯನ್ನು ಕೊಂಡು ಹೋಗುತ್ತಾರೆ. ಸೋಮವಾರ ಇಂದು ಕೂಡಾ ಹಲವಾರು ಮಂದಿ ತೆನೆಯನ್ನು ಕೊಂಡು ಹೋಗಿ ಹಬ್ಬ ಆಚರಿಸಿದರು. ಧರ್ಮ , ನಂಬಿಕೆ ಆಚರಣೆಗೆ ಒತ್ತು ನೀಡುವ ಗೆಳೆಯರ ಬಳಗ ಮಾದರಿಯಾಗಿದೆ.

Edited By : Manjunath H D
Kshetra Samachara

Kshetra Samachara

26/09/2022 08:18 pm

Cinque Terre

3.68 K

Cinque Terre

0

ಸಂಬಂಧಿತ ಸುದ್ದಿ