ಉಡುಪಿ: ದೀಪಾವಳಿ ಬಂತೆಂದರೆ ಬಗೆಬಗೆಯ ಹಣತೆ ,ದೀಪಗಳೇ ಎಲ್ಲೆಡೆ ಕಾಣಸಿಗುತ್ತವೆ. ಪರ್ಕಳದಲ್ಲಿ ಆಮೆಯ ಮೇಲೆ ದೀಪ (ಕೂರ್ಮ ದೀಪ)ವೊಂದು ಗಮನ ಸೆಳೆದಿದೆ. ಪರ್ಕಳದ ಗಣಪತಿ ಕಲಾವಿದ ದೇವರಾಜ್ ನಾಯಕ್ ಸಣ್ಣಕ್ಕಿಬೆಟ್ಟು ಕೈಚಳಕದಲ್ಲಿ ಈ ಕೂರ್ಮ ದೀಪ ಮೂಡಿಬಂದಿದೆ, ಸುಮಾರು 20 ಹಂಚುಗಳಿಗೆ ಬಳಸುವಷ್ಟು ಆವೆ ಮಣ್ಣಿನ ಅಚ್ಚುಗಳನ್ನು ಇದಕ್ಕೆ ಬಳಸಿದ್ದಾರೆ.
ದೀಪ ಉರಿಸುವಾಗ ಏಕಕಾಲಕ್ಕೆ ಹತ್ತು ಲೀಟರ್ ನಷ್ಟು ಎಣ್ಣೆ ಬೇಕಾಗುತ್ತದೆ.ಒಂದು ಹಂಚು ಆವೆ ಮಣ್ಣಿನ ಹಸಿಮಣ್ಣು 3 ಕೆಜಿ ಭಾರ ಇರುತ್ತದೆ, ಹಾಗಾಗಿ ಇದು ಸುಮಾರು 60 ಕೆಜಿ ಬಾರ ಹೊಂದಿದೆ.ಪರ್ಕಳದಲ್ಲಿ ವರ್ಷಂಪ್ರತಿ ನಡೆಯುವ ತುಳುನಾಡ ಸಾಂಪ್ರದಾಯಿಕ ದೀಪಾವಳಿ ಆಚರಣೆ ಸಂದರ್ಭ ಈ ಆವೆ ಮಣ್ಣಿನ ಹಣತೆ ದೀಪವನ್ನು ಬೆಳಗಿಸಲಾಗುತ್ತದೆ ಎಂದು ನಮ್ ಟೀಮ್ ಮಣಿಪಾಲದ ಕಾರ್ಯಕ್ರಮ ಸಂಘಟಕರಾದ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
Kshetra Samachara
02/11/2021 01:14 pm