ಮಂಗಳೂರು: ದ.ಕ. ಜಿಲ್ಲಾಡಳಿತ ಹಾಗೂ ಭಾರತ್ ಸೇವಾದಳ ಆಶ್ರಯದಲ್ಲಿ ನಗರದ ಪುರಭವನದ ಎದುರಿನ ಗಾಂಧಿ ಪ್ರತಿಮೆ ಎದುರು 151 ನೇ ಗಾಂಧಿ ಜಯಂತಿ ಆಚರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರ ಗಣ್ಯರು ಗಾಂಧಿ ಟೋಪಿ ಧರಿಸಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ ಮಹಾತ್ಮ ಗಾಂಧೀಜಿ ಅವರು ಪ್ರೀತಿ, ನ್ಯಾಯದ ಪರವಾಗಿ ಸತ್ಯ, ನಿಷ್ಠೆಯಿಂದ ಹೋರಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ದೇಶಪ್ರೇಮ, ಶಾಂತಿ, ಸೌಹಾರ್ದದೊಂದಿಗೆ ದೇಶವನ್ನು ಒಗ್ಗೂಡಿಸಿದ ಅವರ ಆದರ್ಶ ಇಂದಿಗೂ ಪ್ರಸ್ತುತ ಎಂದರು.
ಮೇಯರ್ ದಿವಾಕರ ಪಾಂಡೇಶ್ವರ ,ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಉಪ ಮೇಯರ್ ವೇದಾವತಿ,ಮುಡಾ ಅಧ್ಯಕ್ಷ ರವಿ ಶಂಕರ್ ಮಿಜಾರ್,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್,ಮನಪಾ ಆಯುಕ್ತ ಅಕ್ಷಯ್ ಶ್ರೀಧರ್,ಡಿಸಿಪಿ ಅರುಣಾಂಶಗಿರಿ,ಎಸಿ ಮದನ್ ಮೋಹನ್,ಸ್ಮಾರ್ಟ್ ಸಿಟಿ ಎಂ.ಡಿ. ಮುಹಮ್ಮದ್ ನಜೀರ್,ತಹಸೀಲ್ದಾರ್ ಗುರು ಪ್ರಸಾದ್, ಭಾರತ್ ಸೇವಾ ದಳದ ಕಾರ್ಯದರ್ಶಿ ಟಿ. ಕೆ.ಸುಧೀರ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
02/10/2020 03:43 pm