ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಇಂದು ಬ್ಯಾರಿ ಲಿಪಿ ಕಲಿಕಾ ವಿಧಾನದ ಗ್ರಾಫಿಕ್ಸ್ ಡಿವಿಡಿ ಬಿಡುಗಡೆ ಮಂಗಳೂರು ತಾಪಂ ಹೊಸ ಕಟ್ಟಡದ 3ನೇ ಮಹಡಿ ಸಭಾಭವನದಲ್ಲಿ ನಡೆಯಿತು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆ ಮಾಡಿದರು. ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, ಬ್ಯಾರಿ ಲಿಪಿ ಸಾಮಾಜಿಕ ಜಾಲತಾಣದಲ್ಲಿ ಬಳಸಲು ಚಾಲನೆ ನೀಡಿದರು. ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಬ್ಯಾರಿ ಭಾಷೆ, ಜನಾಂಗ ತನ್ನದೇ ಆದ ವೈಶಿಷ್ಟ್ಯ ತೆ ಹೊಂದಿದೆ. ಬ್ಯಾರಿ ಜನಾಂಗ ಎಂದಾಕ್ಷಣ ನಮಗೆ ಬಾಲ್ಯದ ನೆನಪಾಗುತ್ತದೆ ಎಂದ ಅವರು, ನಮ್ಮದು ಕೂಡಿ ಬಾಳುವ ಸಮಾಜ. ಬದುಕಿನ ಜೊತೆಗೆ ಧರ್ಮಾಚರಣೆಯಲ್ಲಿ ತೊಡಗಿಸಿಕೊಂಡಾಗ ಜೀವನ ಸುಂದರವಾಗುತ್ತದೆ. ಬ್ಯಾರಿ ಭಾಷೆಗೆ ಹೊಸದಾಗಿ ಲಿಪಿ ಕಂಡು ಹಿಡಿಯಲಾಗಿದೆ. ಅದನ್ನು ಕಲಿಯಬೇಕು ಎಂದರು.
ರಿಜಿಸ್ಟ್ರಾರ್ ಪೂರ್ಣಿಮಾ, ಬ್ಯಾರಿ ಲಿಪಿ ಗ್ರಾಫಿಕ್ ಡಿಸೈನರ್ ಸಚಿನ್ ಷಾ, ಬ್ಯಾರಿ ಲಿಪಿ ರಚನೆ, ಪರಿಶೀಲನೆ, ಸಂಶೋಧನೆ ಸಮಿತಿಯ ಸದಸ್ಯರಾದ ಎ.ಕೆ. ಕುಕ್ಕಿಲ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಅಬ್ದುಲ್ ರಝಾಕ್ ಅನಂತಾಡಿ, ಹೈದರ್ ಅಲಿ, ಡಾ.ಅಬೂಬಕ್ಕರ್ ಸಿದ್ದೀಕ್, ಹಂಝ ಮಲಾರ್, ಅಬ್ದುಲ್ ಸಮದ್ ಬಾವಾ ಪುತ್ತೂರು, ಬ್ಯಾರಿ ಅಕಾಡೆಮಿ ಸದಸ್ಯರಾದ ಶಂಶೀರ್ ಬುಡೋಳಿ, ನಫೀಸತ್ತ್ ಮಿಸ್ರಿಯಾ
ಉಪಸ್ಥಿತರಿದ್ದರು.
ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಅಬ್ದುಲ್ ರಝಾಕ್ ಅನಂತಾಡಿ ವಂದಿಸಿದರು. ಪತ್ರಕರ್ತ ಶಂಶೀರ್ ಬುಡೋಳಿ ನಿರೂಪಿಸಿದರು.
Kshetra Samachara
30/09/2020 04:37 pm