ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದೇಶಿ ಗೂಡುದೀಪ ತಯಾರಿಯಲ್ಲಿ ಪರಿಣತರು ಈ ಕೃಷ್ಣನಗರಿ ಕುವರಿಯರು

ಉಡುಪಿ: ಬೆಳಕಿನ ಹಬ್ಬ ದೀಪಾವಳಿಯ ಅಂದ ಹೆಚ್ಚಿಸುವುದು

ಬಣ್ಣ ಬಣ್ಣದ ಗೂಡುದೀಪಗಳು. ಮನೆ ಮುಂದೆ ಕಂಗೊಳಿಸುವ ಸಾಂಪ್ರದಾಯಿಕ ಗೂಡುದೀಪಗಳನ್ನು ತಯಾರಿಸುವುದೇ ಒಂದು ವಿಶಿಷ್ಟ ಕಲೆ. ಇಂತಹ ಕಲೆಯನ್ನು ಕರಗತ ಮಾಡಿಕೊಂಡ ಯುವತಿಯರ ತಂಡವೊಂದು ಬಗೆ ಬಗೆಯ ಗೂಡು ದೀಪಗಳನ್ನು ತಯಾರಿಸುತ್ತಿದೆ.

"ಹೌದು. ಮಾರುಕಟ್ಟೆಯಲ್ಲಿರೋ ಚೀನಿ ಗೂಡುದೀಪಗಳಿಗೆ ಸೆಡ್ಡು ಹೊಡೆಯುವಂತೆ, ಸಾಂಪ್ರದಾಯಿಕ ಗೂಡು ದೀಪಗಳನ್ನು ತಯಾರಿಸುತ್ತದೆ ಉಡುಪಿಯ ಹೆಣ್ಣು ಮಕ್ಕಳ ತಂಡ. ಹಿಂದೆ ಚೀನಿ ಗೂಡುದೀಪಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಚೀನಿ ಗೂಡುದೀಪಗಳನ್ನು ಓವರ್ ಟೇಕ್ ಮಾಡಿ ಸಾಂಪ್ರದಾಯಿಕ ಗೂಡು ದೀಪಗಳು ‌ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಸೃಷ್ಟಿಸಿಕೊಂಡಿವೆ. ಹೀಗಾಗಿ ಉಡುಪಿಯ ಯುವತಿಯರ ತಂಡ ನಾಲ್ಕು ವರ್ಷಗಳಿಂದ ಸಾಂಪ್ರದಾಯಿಕ ಗೂಡುದೀಪ ತಯಾರಿಸುತ್ತಿದೆ.

"ದೀಪಾವಳಿ ಹಬ್ಬದ ಮೊದಲೇ ಹೆಣ್ಣು ಮಕ್ಕಳ ತಂಡ, ಬಿದಿರಿನ ಗೂಡುದೀಪ ತಯಾರಿಸಲು ಶುರು ಮಾಡುತ್ತದೆ. ಪ್ಲಾಸ್ಟಿಕ್ ರಹಿತ ಗೂಡುದೀಪ ಅಪ್ಪಟ ಮಂಟಪ ಶೈಲಿ ಹೋಲುತ್ತದೆ. ಗೂಡುದೀಪದ ಒಳಗೆ ಹಣತೆ ಅಥವಾ ಲೈಟ್ ಇಡುವುದಕ್ಕೂ ವ್ಯವಸ್ಥೆ ಮಾಡಿದ್ದಾರೆ. ಬಣ್ಣದ ಕಾಗದಗಳನ್ನು ಅಂಟಿಸಿ, ವಿಶೇಷ ಮೆರುಗು ಕೂಡ ನೀಡುತ್ತಾರೆ. ಸದ್ಯ ಕೃಷ್ಣನೂರಿನ ಈ ಯುವತಿಯರು ತಯಾರಿಸುವ ಗೂಡುದೀಪಗಳಿಗೆ ಬಹು ಡಿಮ್ಯಾಂಡ್ ಇದೆ"

ಒಟ್ಟಿನಲ್ಲಿ ದೀಪಾವಳಿಯಂದು ಸಾಂಪ್ರದಾಯಿಕ ಗೂಡುದೀಪಗಳನ್ನು ಮನೆ ಮುಂದೆ ಇರಿಸಿ ಹಣತೆ ಬೆಳಗಿಸಿದರೆ ಅದರ ಖುಷಿನೇ ಬೇರೆ. ಜೊತೆಗೆ ನಮ್ಮ ದೇಶಿ ಸಂಸ್ಕ್ರತಿಯನ್ನೂ ಬೆಳೆಸಿದಂತಾಗುತ್ತದೆ.

Edited By : Nagesh Gaonkar
Kshetra Samachara

Kshetra Samachara

04/11/2021 05:19 pm

Cinque Terre

11.09 K

Cinque Terre

1

ಸಂಬಂಧಿತ ಸುದ್ದಿ