ಮಂಗಳೂರು:ಸಹಕಾರ ರತ್ನ, ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ ಬೆಂಗಳೂರು 'ಇದರ ಅಧ್ಯಕ್ಷರಾಗಿ, ಎರಡನೇ ಬಾರಿಗೆ ಅವಿರೋ ಧವಾಗಿ ಆಯ್ಕೆಗೊಂಡಿ ರುವ ಹಿನ್ನಲೆಯಲ್ಲಿ ಎಲ್ಲಾ ಸಹಕಾರಿ ಗಳ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಲ್ಲಿಂದು ಅಭಿನಂದನಾ ಸಮಾರಂಭ ನಡೆಯಿತು. ಅಧ್ಯಕ್ಷತೆ ಯನ್ನು ವಹಿಸಿ ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯ ಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು.
ರಾಜೇಂದ್ರ ಕುಮಾರ್ ಅವರು ಸಹಕಾರಿ ರಂಗದ ಮೂಲಕ ಏಕಾಗ್ರತೆ, ಅಚಲವಾದ ನಂಬಿಕೆ ,ಶ್ರದ್ಧೆ ಇದ್ದ ಕಾರಣ ಅವರು ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದಾರೆ. ಸಹಕಾರಿ ರಂಗದ ಬಗ್ಗೆ ನಂಬಿಕೆ ಮೂಡಿಸಿದ್ದಾರೆ. ನೂ ರಾರು ಶಾಖೆಗಳನ್ನು ಮಾಡಿದ್ದಾರೆ. ಮಹಾತ್ಮಾಗಾಂಧಿಯವರು ಸಹಕಾರಿ ರಂಗಕ್ಕೆ ಮಹತ್ವ ನೀಡಿದ್ದರು. ಸಹಕಾರಿ ರಂಗದ ಮೂಲಕ ಅಭಿವೃದ್ಧಿ ಎಂದು ಅವರು ನಂಬಿದ್ದರು. ಸಹಕಾರಿ ತತ್ವ ಎಂದರೆ ಎಲ್ಲರೂ ಜೊತೆ ಯಾಗಿ ಬೆಳೆಯೋಣ ಎಲ್ಲರೂ ಜೊತೆ ಯಾಗಿ ಸಾಧಿಸೋಣ ಎನ್ನುವುದು. ಜಿಲ್ಲೆಯ ಸಹಕಾರಿ ರಂಗವನ್ನು ಹಲವು ದಶಕಗಳಿಂದ ನೋಡಿದ್ದೇನೆ. ಈ ಹಿಂದೆ ಇದರ ನೇತೃತ್ವ ವಹಿಸಿದ್ದವರು ಸಹಕಾರಿ ರಂಗವನ್ನು ಎಚ್ಚರಿಕೆ ಯಿಂದ ಕಾವು ಕೊಟ್ಟು ಬೆಳೆಸಿದರು ರಾಜೇಂದ್ರ ಕುಮಾರ್ ಈ ರಂಗವನ್ನು ಇನ್ನಷ್ಟು ವಿಸ್ತಾರವಾಗಿ ಬೆಳೆಯುವಂತೆ ಹಕ್ಕಿ ಯಂತೆ ಹಾರಲು ಅವಕಾಶ ಮಾಡಿದರು. ಈ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಅಭಿನಂದನಾ ಮಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಭಿನಂದನಾ ಭಾಷಣ ಮಾತನಾಡುತ್ತಾ, ರಾಜೇಂದ್ರ ಕುಮಾರ್ ಸಹಕಾರಿ ರಂಗದಲ್ಲಿ ಸಾಧನೆ ಮಾಡಿ ರಾಜನಂತೆ ಮೆರೆದವರು. ಸಹಕಾರಿ ರಂಗದ ಭೀಷ್ಮ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಇದರ ಇತಿಹಾಸದಲ್ಲಿ 1945ರ ನಂತರ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಮೊದಲ ಅಧ್ಯಕ್ಷರಾಗಿ 2017ರಲ್ಲಿ ಆಯ್ಕೆಗೊಂಡಿದ್ದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಇದೀಗ ಎರಡನೇ ಬಾರಿಯೂ ಈ ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಗೊಳ್ಳುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ ಎಂದರು.
Kshetra Samachara
25/09/2022 11:47 am