ಮುಲ್ಕಿ: ಕಾರ್ನಾಡ್ ಯಂಗ್ ಸ್ಟಾರ್ ಅಸೋಸಿಯೇಷನ್ ( ರಿ)ನ 41 ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕಾರ್ನಾಡು ಬೈಪಾಸ್ ಬಳಿ ಸಂಘದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಡಾ. ವಾಸುದೇವ ಬೆಳ್ಳೆ ವಹಿಸಿ ಮಾತನಾಡಿ ಸ್ವಾರ್ಥ ದುರಾಸೆಯ ಈಗಿನ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಬಡ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡುತ್ತಿರುವ ಸಂಘಟನೆಯ ಸಾಮಾಜಿಕ ಕೈಂಕರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಳೆಯಂಗಡಿ ವಿದ್ಯಾ ವಿನಾಯಕ ಯುವಕ ಮಂಡಲದ ಕಾರ್ಯಾಧ್ಯಕ್ಷರಾದ ಸುಧಾಕರ ಆರ್ ಅಮೀನ್, ಕಾರ್ನಾಡ್ ಯಂಗ್ ಸ್ಟಾರ್ ಅಸೋಸಿಯೇಷನ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಕೋಶಾಧಿಕಾರಿ ಕೃತಿಕ್, ಕಾರ್ಯದರ್ಶಿ ದಿಹಾನ್ ಶೆಟ್ಟಿ, ಪದಾಧಿಕಾರಿಗಳಾದ ಸತೀಶ್ ಕೋಟ್ಯಾನ್,ಉದಯ ಕುಮಾರ್,ಕಮಲಾಕ್ಷ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿಧ್ಯಾನಿಧಿ ವಿತರಣೆ, ಪ್ರತಿಭಾ ಪುರಸ್ಕಾರ ನಡೆಯಿತು.ಸಾಧಕರ ನೆಲೆಯಲ್ಲಿ ಕೆಮ್ರಾಲ್ ಅತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷತಾಧಿಕಾರಿ ಕೊರೋನಾ ವಾರಿಯರ್ ಮಾರ್ಗರೇಟ್ ಸುದರ್ಶನಿ ರವರನ್ನು ಗೌರವಿಸಲಾಯಿತು.
ಸುಹಾನ್ ಜೇಸುದಾಸ್ ನಿರೂಪಿಸಿದರು.ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಕ್ಕಳಿಂದ ನೃತ್ಯ ಹಾಗೂ ನಾಟಕ ಪ್ರದರ್ಶನ ನಡೆಯಿತು.
Kshetra Samachara
07/01/2022 08:17 pm