ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಲ್ಕಿ ಸರ್ಫಿಂಗ್ ಸ್ವಾಮಿ ಫೌಂಡೇಶನ್, ಮಂತ್ರ ಸರ್ಫ್ ಕ್ಲಬ್ ನಿಂದ ಬೀಚ್ ಸ್ವಚ್ಛತೆ

ಮೂಲ್ಕಿ: ಮೂಲ್ಕಿ-ಹೆಜಮಾಡಿ ಶಾಂಭವಿ ಅಳಿವೆ ಬಾಗಿಲಿನ ಸರ್ಫಿಂಗ್ ಭಾಗದಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ಸಂಗ್ರಹಿಸಿ ಸೂಕ್ತ ವಿಲೇವಾರಿಗೆ ವಿತರಿಸುವ ವಿನೂತನ ಬೀಚ್ ಕ್ಲೀನ್ ಅಪ್ ಕಾರ್ಯಕ್ರಮ ವಿವಿಧ ಸಂಘಟನೆಗಳ ಜತೆಗೂಡಿ ಮೂಲ್ಕಿಯ ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ಭಾನುವಾರ ನಡೆಯಿತು.

ಮೂಲ್ಕಿ ಲಯನ್ಸ್ ಕ್ಲಬ್, ಮಂಗಳೂರು ಕೋಸ್ಟ್ ಗಾರ್ಡ್, ಎನ್ಎಂಪಿಟಿ, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ, ಮಂಗಳೂರಿನ ಯಂಗ್ ಇಂಡಿಯನ್ಸ್, ಕನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ), ಮಂಗಳೂರು ಬೈಸಿಕಲ್ ಕ್ಲಬ್, ಮಣಿಪಾಲ ಫಾಲ್ಕಮ್ ಫಿಟ್ನೆಸ್ ಜಿಮ್, ಮೂಲ್ಕಿ ಯುವವಾಹಿನಿ ಘಟಕ, ಹಳೆಯಂಗಡಿ-ತೋಕೂರು ಗಜಾನನ ಸ್ಪೋರ್ಟ್ಸ್ ಕ್ಲಬ್, ಬಪ್ಪನಾಡು ಪಂಚದುರ್ಗ ಕ್ಲಬ್, ಮೂಲ್ಕಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳು ಥೈಮ್ ಫ್ಯಾಮಿಲಿ ರೆಸ್ಟೋರೆಂಟ್, ಅಡ್ವೆಂಚರ್ ವರ್ಕ್ಸ್, ಮಂತ್ರ ಸರ್ಫ್ ಕ್ಲಬ್, ಕಲ್ಬಾವಿ ಕ್ಯಾಶ್ಯೂಸ್, ಅರುಣಾ ಟೇಸ್ಟ್ ಮತ್ತು ಟ್ರಸ್ಟ್, ಬಿಸ್ಲೇರಿ, ಪ್ರಾಯೋಜಕತ್ವದಲ್ಲಿ ಸುಮಾರು 150ಕ್ಕೂ ಅಧಿಕ ಉತ್ಸಾಹಿಗಳು ಬೀಚ್ ನಲ್ಲಿ ರಾಶಿ ಬಿದ್ದಿರುವ ತ್ಯಾಜ್ಯಗಳ ಪೈಕಿ ಗ್ಲಾಸ್, ಪ್ಲಾಸ್ಟಿಕ್ ಮತ್ತು ರಬ್ಬರ್ ಪ್ರತ್ಯೇಕವಾಗಿ ಸಂಗ್ರಹಿಸಿದರು. ಇವೆಲ್ಲವೂ ಮರುಬಳಕೆಗೆ ಸಾಧ್ಯವಿದ್ದು, ಅಲ್ಲಿಂದ ದೋಣಿ ಮೂಲಕ ಸಾಗಿಸಿ ಸೂಕ್ತ ವಿಲೇವಾರಿಗರ ವಿತರಿಸಲಾಯಿತು. ಒಟ್ಟು 130 ಗೋಣಿ ಗ್ಲಾಸ್, 150 ಗೋಣಿ ರಬ್ಬರ್ ಮತ್ತು 150 ಗೋಣಿ ಪ್ಲಾಸ್ಟಿಕ್ ಸಂಗ್ರಹಿಸಲಾಯಿತು.

ಕೋಸ್ಟ್ ಗಾರ್ಡ್ ನ ಡಿಐಜಿ ವೆಂಕಟೇಶ್, ಎನ್ ಎಂಪಿಟಿ ಡೆಪ್ಯುಟಿ ಚೇರ್ಮನ್ ಕೆ.ಜಿ.ನಾಥ್, ಸರ್ಫಿಂಗ್ ಸ್ವಾಮಿ ಫೌಂಡೇಶನ್ ನಿರ್ದೇಶಕರಾದ ಗೌರವ್ ಹೆಗ್ಡೆ ಮತ್ತು ಶಮಂತ್ ಕುಮಾರ್, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ರಾಮಮೋಹನ್, ಮಂತ್ರ ಸರ್ಪ ಕ್ಲಬ್ ನ ಕಿರಣ್, ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್, ಗಜಾನನ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಅಧ್ಯಕ್ಷ ನವೀನ್ ಶೆಟ್ಟಿಗಾರ್, ಪಂಚದುರ್ಗ ಅಧ್ಯಕ್ಷ ಚಂದ್ರಶೇಖರ್, ಯುವವಾಹಿನಿ ಅಧ್ಯಕ್ಷ ದಿವಾಕರ ಕೋಟ್ಯಾನ್, ಉದಯ ಅಮೀನ್, ಮಧುಕರ ಕುಡ್ವ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

27/09/2020 04:58 pm

Cinque Terre

21.8 K

Cinque Terre

0

ಸಂಬಂಧಿತ ಸುದ್ದಿ