ಉಡುಪಿ: 2022ರ ಜನವರಿಯಲ್ಲಿ ಆರಂಭವಾಗುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಇಂದು ಮಠದ ಆವರಣದಲ್ಲಿ ಬಾಳೆ ಮುಹೂರ್ತ ನೆರವೇರಿತು.
ಬೆಳಿಗ್ಗೆ 8.32ಕ್ಕೆ ರಥಬೀದಿಯಲ್ಲಿರುವ ಕೃಷ್ಣಾಪುರ ಮಠದಲ್ಲಿ ಬಾಳೆ ಮುಹೂರ್ತ ನಡೆಯಿತು. ಕೃಷ್ಣಾಪುರ ಮಠಾಧೀಶರು ಬಾಳೆ ಗಿಡಕ್ಕೆ ಪೂಜೆ ಸಲ್ಲಿಸಿ ನೆಡುವ ಮೂಲಕ ಮುಹೂರ್ತ ನಡೆಸಿದರು.
ಪರ್ಯಾಯಕ್ಕೆ ಮುನ್ನ ಬಾಳೆ ಮುಹೂರ್ತ , ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಹಾಗೂ ಅಂತಿಮವಾಗಿ ಭತ್ತ ಮುಹೂರ್ತ ನಡೆಸುವುದು ಸಂಪ್ರದಾಯ. ಅದರಂತೆ ಇವತ್ತು ಮೊದಲ ಮುಹೂರ್ತವಾದ ಬಾಳೆ ಮುಹೂರ್ತ ಸಂಪನ್ನಗೊಂಡಿತು.
ಸದ್ಯ ಅದಮಾರು ಮಠದ ಪರ್ಯಾಯ ನಡೆಯುತ್ತಿದೆ. ಅದಮಾರು ಪರ್ಯಾಯದ ಅವಧಿ ಮುಗಿಯುವವರೆಗೂ ಹಂತಹಂತವಾಗಿ ಮುಹೂರ್ತದ ವಿಧಿವಿಧಾನಗಳು ನಡೆಯಲಿವೆ.
Kshetra Samachara
30/11/2020 01:43 pm