ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೇಜಾವರಶ್ರೀ ಪತಂಜಲಿ ಯೋಗಪೀಠಕ್ಕೆ ಭೇಟಿ

ಉಡುಪಿ: ಯೋಗಗುರು ಬಾಬಾ ರಾಮ್ ದೇವ್ ಸಾರಥ್ಯದ ಹರಿದ್ವಾರದ ಜಗತ್ಪಸಿದ್ಧ ಪತಂಜಲಿ ಯೋಗ ಪೀಠಕ್ಕೆ ಸೋಮವಾರ ಪೇಜಾವರ ಶ್ರೀಗಳು ಭೇಟಿ ನೀಡಿದರು.

ಪತಂಜಲಿ ಆಯುರ್ವೇದ ಆಸ್ಪತ್ರೆ , ಆಯುರ್ವೇದ ವನ , ಪತಂಜಲಿ ಪೀಠದ ಉತ್ಮನ್ನ ಗಳ ಮಳಿಗೆ , ಮೊದಲಾದ ಎಲ್ಲ ವಿಭಾಗಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿ ಅತೀವ ಸಂತಸ ವ್ಯಕ್ತಪಡಿಸಿದರು .

ಬಳಿಕ ರಾಮ್ ದೇವ್ ಬಾಬಾ ಹಾಗೂ ಆಚಾರ್ಯ ಬಾಲಕೃಷ್ಣರು ಶ್ರೀಗಳನ್ನು ಗೌರವಿಸಿದರು .‌ ಶ್ರಿಗಳವರೂ ರಾಮ್ ದೇವ್ ರನ್ನು ಗೌರವಿಸಿದರು. ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ರಾಮ್ ದೇವ್ ಜೀಯವರು ವಿಶೇಷವಾಗಿ ಸ್ಮರಿಸಿದರು .‌

ಡಾ ಲಲಿತ್ ಮೋಹನ್ ಮಿಶ್ರಾರವರು ಪತಂಜಲಿ ಯೋಗ ಪೀಠದ ಎಲ್ಲ ವಿಭಾಗಗಳನ್ನು ಶ್ರೀಗಳಿಗೆ ಪರಿಚಯಿಸಿದರು .ಈ ಸಂದರ್ಭ ಶ್ರೀಗಳ ಶಿಷ್ಯರು ಆಪ್ತ ಕಾರ್ಯದರ್ಶಿಗಳು ಉಪಸ್ಥಿತರಿದ್ದರು .

Edited By : Manjunath H D
Kshetra Samachara

Kshetra Samachara

09/11/2020 07:48 pm

Cinque Terre

11.49 K

Cinque Terre

0

ಸಂಬಂಧಿತ ಸುದ್ದಿ