ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾ ಸಂಸ್ಥೆಗಳ ಸಂಯೋಜನೆಯಲ್ಲಿ ನ.22ರಿಂದ 24ರವರೆಗೆ ಮೂರು ದಿನಗಳ ಕಾಲ ಭ್ರಮರ ಇಂಚರ ನುಡಿಹಬ್ಬ ನಡೆಯಲಿದೆ.
ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ನಾಲ್ಕನೆಯ ವರುಷದ ಈ ಸಮ್ಮೇಳನವನ್ನು ನ.22ರ ಶುಕ್ರವಾರ ನಳಿನ್ ಕುಮಾರ್ ಉದ್ಘಾಟಿಸಲಿದ್ದಾರೆ.
ಅಂದು ಬೆಳಿಗ್ಗೆ ಪದವಿ ಕಾಲೇಜಿನಿಂದ ಸಮ್ಮೇಳನ ನಡೆಯುವ ಪದವೀಪೂರ್ವ ಕಾಲೇಜುವರೆಗೆ ಮೆರವಣಿಗೆ ನಡೆಯಲಿದ್ದು, ನೂತನ ಒಳಾಂಗಣ ಕ್ರೀಡಾಂಗಣ ಹಾಗೂ ಸಭಾಭವನವನ್ನು ಡಾ. ಎ.ಜೆ. ಶೆಟ್ಟಿ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಇಂಚರ, ಭ್ರಮರವಾಣಿ ಸಂಚಿಕೆಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ಬಿಡುಗಡೆಗೊಳಿಸುವರು. ಖ್ಯಾತ ಪತ್ರಕರ್ತ ಅಜಿತ್ ಹನಮಕ್ಕನವರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಳಿಕ ನಡೆಯುವ ಗೋಷ್ಟಿಯಲ್ಲಿ ನಾಲ್ಕು ನುಡಿಹಬ್ಬದ ಸಮ್ಮೇಳನಾಧ್ಯಕ್ಷರಾದ ಲಕ್ಷ್ಮೀಶ ತೋಳ್ಪಾಡಿ, ನಾಡೋಜ ಕೆ.ಪಿ.ರಾವ್, ಶ್ರೀಧರ ಡಿ.ಎಸ್, ಪಾದೇಕಲ್ ವಿಷ್ಣು ಭಟ್ಟರ ಉಪಸ್ಥಿತಿಯಲ್ಲಿ ಗೋಷ್ಟಿ ನಡೆಯಲಿದೆ. ಖ್ಯಾತ ಟಿವಿ ನಿರೂಪಕಿ ಅನುಶ್ರೀ ಸಾಧನೆಗಳೆಡೆ ಸಾಗುವ ಬಗೆಯ ಬಗ್ಗೆ ಮಾತನಾಡಲಿದ್ದಾರೆ.
ನ.23ರ ಶನಿವಾರ ಲಕ್ಷ್ಮೀಶ ತೋಳ್ಪಾಡಿ ಅವರೊಂದಿಗೆ ಸಂವಾದ, ಭಾಷಾ ಸೊಗಡು ಗೋಷ್ಟಿಯಲ್ಲಿ ಸಂಸ್ಕೃತದ ಅವಕಾಶಗಳು ಬಗ್ಗೆ ಅವಿನಾಶ ಕೊಡಂಕಿರಿ ಹಾಗೂ ತುಳು ಕಲಿಕೆಯ ಬಗ್ಗೆ ಡಾ. ವಿ.ಕೆ. ಯಾದವ್ ಮಾತನಾಡಲಿದ್ದಾರೆ. ಯಕ್ಷಗಾನದ ಸೌಂದರ್ಯ ಗೋಷ್ಟಿಯಲ್ಲಿ ಮುರಳೀ ಕಡೇಕಾರ್, ಪು.ಗುರುಪ್ರಸಾದ ಭಟ್ ಮಾತನಾಡಲಿದ್ದಾರೆ. ಜನಸಾಮಾನ್ಯ ಸಾಧಕರಾದ ಧನ್ಯಾ ಪುತ್ತೂರು, ರವಿ ಕಟಪಾಡಿ, ಈಶ್ವರ ಮಲ್ಪೆ, ಕೃಷ್ಣ ಮೂಲ್ಯ, ಶೀನ ಶೆಟ್ಟಿ ಸ್ಪೂರ್ತಿಯ ಮಾತುಗಳನ್ನಾಡಲಿದ್ದಾರೆ.
ನ.24ರ ಭಾನುವಾರ ಡಾ. ಅನಂತಪ್ರಭು ಜಿ. ಸಾಮಾಜಿಕ ಜಾಲತಾಣಗಳ ಬಗ್ಗೆ, ಗಿರಿಜಾ ಸಿದ್ದಿ ರಂಗಭೂಮಿ ಸಿನಿಮಾ ಬಗ್ಗೆ, ನಮ್ಮ ಹೆಮ್ಮೆಯ ಇತಿಹಾಸದ ಬಗ್ಗೆ ಮಾಜಿ ಸಂಸದ ಪ್ರತಾಪಸಿಂಹ, ಕನ್ನಡ ಭಾಷೆಯ ಸೊಗಸು ಕುರಿತು ಮನು ಹಂದಾಡಿ ಮಾತನಾಡಲಿದ್ದಾರೆ. ಅಂದು ಸಮಾರೋಪ ಕಾರ‍್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಮಪ್ರಕಾಶ ಹೊಳ್ಳ, ಡಾ. ಎಂ.ಪಿ.ಶ್ರೀನಾಥ್ ಗಣೇಶ್ ಸಂಕಮಾರ್, ಮಹಾಬಲ ಪೂಜಾರಿ ಭಾಗವಹಿಸಲಿದ್ದು, ಸಾಧಕ ಹಿರಿಯ ವಿದ್ಯಾರ್ಥಿಗಳಾದ ಸಿಎ ಚಂದ್ರಶೇಖರ ಶೆಟ್ಟಿ, ಕುಡ್ತಿಮಾರುಗುತ್ತು ಭಾಸ್ಕರ ಶೆಟ್ಟಿಯವರಿಗೆ ಹಾಗೂ ರಾಜ್ಯ, ರಾಷ್ಟ್ರಮಟ್ಟದ ಸಾಧಕ ವಿದ್ಯಾರ್ಥಿಗಳಿಗೆ ಸಂಮಾನ ನಡೆಯಲಿದೆ.
Kshetra Samachara
20/11/2024 09:35 pm