ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ʼಯಕ್ಷಲೋಕʼ ದಲ್ಲಿ 25 ವರ್ಷಗಳಿಂದ ನಾರಿಯರ ಯಶಸ್ವಿ ಪಯಣ- ಕಲಾವಿದೆ ಜ್ಯೋತಿ ಮಾರ್ಗದರ್ಶನ

ಬ್ರಹ್ಮಾವರ: 25 ವರ್ಷಗಳಿಂದಲೂ ಉಡುಪಿ ಜಿಲ್ಲೆಯ ಕೊಕ್ಕರ್ಣೆಯಲ್ಲಿ ಯಕ್ಷಗಾನ ಕಲಾ ಮಂಡಳಿಯೊಂದು ಮಹಿಳಾ ಮಣಿಗಳಿಂದಲೇ ಮುನ್ನಡೆಯುತ್ತಿದ್ದು, ಗಂಡು ಕಲೆ ಖ್ಯಾತಿಯ ಯಕ್ಷಗಾನದಲ್ಲೂ ಸೈ ಎನಿಸಿಕೊಂಡಿದ್ದಾರೆ.

ಬಡಗುತಿಟ್ಟಿನ ಯಕ್ಷಗಾನದಲ್ಲಿ ಕೊಕ್ಕರ್ಣೆ ನರಸಿಂಹ ಕಾಮತ್ ಸ್ತ್ರೀ ವೇಷದಲ್ಲಿ ಖ್ಯಾತಿ ಪಡೆದವರಾಗಿದ್ದು, ಅವರ ಮೊಮ್ಮಗಳು ಜ್ಯೋತಿ ಎಂ. ಪ್ರಭು ಶ್ರೀದುರ್ಗಾಪರಮೇಶ್ವರೀ ಮಹಿಳಾ ಯಕ್ಷಗಾನ ಸಂಘವನ್ನು ಕೊಕ್ಕರ್ಣೆಯಲ್ಲಿ ಕಟ್ಟಿದ್ದಾರೆ. ಸುಧನ್ವಾರ್ಜುನ, ಬಲಿ ಚಕ್ರವರ್ತಿ, ಶನೀಶ್ವರ ಮಹಾತ್ಮೆ, ಶಶಿಪ್ರಭಾ ಪರಿಣಯ, ಕಂಸ ವಧೆ ಇತ್ಯಾದಿ ಯಕ್ಷಗಾನ ಪ್ರಸಂಗಗಳನ್ನು ಯಶಸ್ವಿಯಾಗಿ ಪ್ರದರ್ಶಿಸುತ್ತಾ ತಂಡವನ್ನು 25 ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ಜ್ಯೋತಿ ಪ್ರಭು ಅವರ ಸೊಸೆ ಗಾಯತ್ರಿ ಪ್ರಭು ಕೂಡ ಪ್ರತಿಭಾನ್ವಿತ ಯಕ್ಷಗಾನ ಕಲಾವಿದೆಯಾಗಿದ್ದು, ಅತ್ತೆಗೆ ಸಾಥ್ ನೀಡುತ್ತಿದ್ದಾರೆ. ಸರಕಾರ ಇಂತಹ ಮಹಿಳಾ ಕಲಾ ತಂಡವನ್ನು ಗುರುತಿಸಿ, ಗೌರವಿಸುವ ಕಾರ್ಯ ನಡೆಸಬೇಕಾಗಿದೆ.

-ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ

Edited By : Manjunath H D
PublicNext

PublicNext

21/10/2024 10:48 pm

Cinque Terre

28.67 K

Cinque Terre

0

ಸಂಬಂಧಿತ ಸುದ್ದಿ