ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಾದರೆ ಗ್ರಾಮದ ಅಭಿವೃದ್ಧಿ ಸಾಧ್ಯ - ಸಂತೋಷ್ ಕುಮಾರ್ ಹೆಗ್ಡೆ

ಮುಲ್ಕಿ: ಧಾರ್ಮಿಕ ಕೇಂದ್ರಗಳು ನಿರಂತರ ಬೆಳೆದು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.

ಅವರು ಕಿನ್ನಿಗೋಳಿ ಸಮೀಪದ ಗೋಳಿಜೋರ ಹರಿಹರ ಶ್ರೀ ರಾಮ ಭಜನಾ ಮಂದಿರ ರಾಮ ನಗರದ ಜೀರ್ಣೋದ್ದಾರದ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ  ಶ್ರೀ ಕ್ಷೇತ್ರದ ಗೋಪುರದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.

ಕ್ಷೇತ್ರಕ್ಕೆ ಮುಖ್ಯದ್ವಾರ, ಅವರಣ ಗೋಡೆ, ಇಂಟರ್ ಲಾಕ್ ಮತ್ತಿತರ ಕಾಮಗಾರಿಗಳೂ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯಲಿದೆ, ಸಭೆಯಲ್ಲಿ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಧನಂಜಯ ಶೆಟ್ಟಿಗಾರ್ ಸಾಗರಿಕಾ, ಮುಖ್ಯಪ್ರಾಣ ಕಿನ್ನಿಗೋಳಿ,  ಗಂಗಾಧರ ಶೆಟ್ಟಿಗಾರ್, ಶಂಕರ ಮಾಸ್ಟರ್, ಪ್ರಕಾಶ್ ಹೆಗ್ಡೆ ಎಳತ್ತೂರು, ಶರತ್ ಶೆಟ್ಟಿ ಗೋಳಿಜೋರ, ಶಶೀಂದ್ರ ಶೆಟ್ಟಿ ಅಡ್ರಗುತ್ತು,  ಗೋಪಾಲ ಕೃಷ್ಣ ಕಾಡುಮನೆ, ರಘು ಗೋಳಿಜೋರ, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ, ಪ್ರಕಾಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

22/10/2024 04:49 pm

Cinque Terre

346

Cinque Terre

0

ಸಂಬಂಧಿತ ಸುದ್ದಿ