ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಾಹಿತ್ಯದ ಸಾಧ್ಯತೆಗಳ ರಂಗಪ್ರಸ್ತುತಿ ಶ್ಲಾಘನೀಯ - ಕ್ಯಾ. ಕಾರ್ಣಿಕ್

ಮಂಗಳೂರು:ಭರತನಾಟ್ಯದಂತಹ ಕಲೆ ಭಾವನೆಗಳ ಮೂಲಕ ವಿಚಾರವನ್ನು ಪ್ರೇಕ್ಷಕರಿಗೆ ಸುಲಭವಾಗಿ ಮುಟ್ಟಿಸುವ ಕೆಲಸವನ್ನು ಮಾಡುತ್ತದೆ. ಈ ನಿಟ್ಟಿನಲ್ಲಿ ನಮಗೆ ಶ್ರೀಕೃಷ್ಣನನ್ನು ಅಂತರಂಗದಲ್ಲಿ ಕಾಣಿಸುವಲ್ಲಿ ನಾಟ್ಯಾರಾಧನಾ "ಭಾವ ನವನವೀನ" ಯಶಸ್ವಿಯಾಗಿದೆ ಎಂದು ಮಾಜೀ ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.

ಅವರು ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ ನಗರದ ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ ಸಭಾಗಂಣದಲ್ಲಿ ನಡೆದ "ನೃತ್ಯಾಮೃತ -10" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಬೋಳೂರು ದ್ರಾವಿಡ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಬಿ ಸುಮಂತ ಕುಮಾರ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನೃತ್ಯ ಕಲಾವಿದೆ ಸಂಘಟಕಿ ರಾಧಿಕಾ ಶೆಟ್ಟಿ, ಹಿರಿಯ ನೃತ್ಯ ಗುರುಗಳಾದ ಉಳ್ಳಾಲ ಮೋಹನ್ ಕುಮಾರ್ , ಎಲ್.ಐ.ಸಿ. ಮಂಗಳೂರಿನ ನಿವೃತ್ತ ಹಿರಿಯ ಶಾಖಾಧಿಕಾರಿ ಎಲ್. ದಿವಾಕರ್ , ಕಾಟಿಪಳ್ಳ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ ದಯಾಕರ್, ಎನ್.ಐ.ಟಿ.ಕೆ ಸುರತ್ಕಲ್ ನ ಪ್ರೊಫೆಸರ್ ಡಾ. ಎ ನಿತ್ಯಾನಂದ ಶೆಟ್ಟಿ, ನಾಟ್ಯಾಂಜಲಿ ಕಲಾ ಅಕಾಡಮಿಯ ಗುರು ವಿ|| ಚಂದ್ರಶೇಖರ ನಾವಡ ಸುರತ್ಕಲ್, ನಾಟ್ಯ ನಿಕೇತನ ಕೊಲ್ಯದ ಗುರು ವಿ|| ರಾಜಶ್ರೀ ಉಳ್ಳಾಲ್ ,ಭರತಾಂಜಲಿ ಕೊಟ್ಟಾರದ ನಿರ್ದೇಶಕಿ ವಿ|| ಪ್ರತಿಮಾ ಶ್ರೀಧರ್ , ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿನಿ ವಿ|| ಸತ್ಯನುಶ್ರೀ ಗುರುರಾಜ್,ನಾಟ್ಯಾರಾಧನಾ ಕಲಾ ಕೇಂದ್ರದ ಟ್ರಸ್ಟಿ ಬಿ ರತ್ನಾಕರ ರಾವ್, ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷ ಡಾ.ಗಣೇಶ್ ಅಮೀನ್ ಸಂಕಮಾರ್,ಸಂಸ್ಥೆಯ ನಿರ್ದೇಶಕಿ ಸುಮಂಗಲಾ ರತ್ನಾಕರ್, ಮಲ್ಲಿಕಾ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು. ವಿ|| ಭವ ಅಮೀನ್ ಸಂಕಮಾರ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ "ಭಾವ ನವನವೀನ" ಕಾರ್ಯಕ್ರಮ ನಡೆಯಿತು.

Edited By : PublicNext Desk
Kshetra Samachara

Kshetra Samachara

22/10/2024 08:24 am

Cinque Terre

2.63 K

Cinque Terre

0

ಸಂಬಂಧಿತ ಸುದ್ದಿ