ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪ್ರತಿಭಾನ್ವಿತ ವಿದ್ಯಾರ್ಥಿನಿ ಯಶಸ್ವಿ ಆಚಾರ್ಯಗೆ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿ ಪ್ರದಾನ

ಕಾಪು: ಉಡುಪಿ ಜಿಲ್ಲೆ ಕಾಪು ತಾಲೂಕು ಕಲ್ಯಾದ ಉಮೇಶ ಆಚಾರ್ಯ- ಶೀಲಾವತಿ ಆಚಾರ್ಯ ದಂಪತಿ ಪುತ್ರಿ ವೈ.ಯು. ಯಶಸ್ವಿ ಆಚಾರ್ಯ ಅವರು 2019-20ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 614 (ಶೇ.98.24) ಅಂಕ ಪಡೆದಿದ್ದು, ಅವರ ಶೈಕ್ಷಣಿಕ ಸಾಧನೆ ಗುರುತಿಸಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ದಾವಣಗೆರೆ-ಸಾಲಿಗ್ರಾಮ ಅವರು ನೀಡಲ್ಪಡುವ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಯನ್ನು ನ.1ರಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಪ್ರದಾನಿಸಲಾಯಿತು.

ಕಾಪು ಉಳಿಯಾರಗೋಳಿ ದಂಡತೀರ್ಥ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ವೈ.ಯು. ಯಶಸ್ವಿ ಭರತನಾಟ್ಯ ಪ್ರವೀಣೆಯಾಗಿದ್ದು, ಸಾಂಸ್ಕ್ರತಿಕ, ಕ್ರೀಡಾ, ಶೈಕ್ಷಣಿಕ ರಂಗದ ಸಾಧಕಿಯೂ ಹೌದು. ಯಾವುದೇ ಕೋಚಿಂಗ್ ಪಡೆದುಕೊಳ್ಳದೆ ಸ್ವತಃ ಅಭ್ಯಸಿಸಿ ಎಸ್ಸೆಸೆಲ್ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ರಿಯಾದ್ ಇಂಟರ್ ನ್ಯಾಷನಲ್ ಇಂಡಿಯನ್ ಸ್ಕೂಲ್‍ನಲ್ಲಿ ಕ್ಲೇ ಮಾಡೆಲಿಂಗ್, ಇಂಟರ್ ನ್ಯಾಷನಲ್ ಚಿಂತನಾ ಡ್ರಾಯಿಂಗ್‍ನಲ್ಲಿ ಪ್ರಥಮ ಪ್ರಶಸ್ತಿ ಗಳಿಸಿದ್ದಾರೆ.

ಕನ್ನಡ ರಾಜ್ಯೋತ್ಸವದಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಯಶಸ್ವಿ ಅವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಕಿರೀಟವಿಟ್ಟು, ಪುಷ್ಪವೃಷ್ಟಿಯೊಂದಿಗೆ ಮೆಡಲ್, ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಲಾಯಿತು.

Edited By : Nagesh Gaonkar
Kshetra Samachara

Kshetra Samachara

03/11/2020 09:42 am

Cinque Terre

17.45 K

Cinque Terre

0

ಸಂಬಂಧಿತ ಸುದ್ದಿ