ಉಡುಪಿ: ಶಿವ ತಾಂಡವ ಸ್ತೋತ್ರದ ಮೂಲಕ ಖ್ಯಾತಿ ಗಳಿಸಿರುವ ಶ್ರೀ ಕಾಳಿ ಚರಣ್ ಮಹಾರಾಜರು ಉಡುಪಿಗೆ ಭೇಟಿ ನೀಡಿ, ಉಡುಪಿಯ ಶ್ರೀ ಅನಂತೇಶ್ವರ ಸ್ವಾಮಿಯ ದರ್ಶನ ಪಡೆದರು.
ಅತಿ ತಲ್ಲೀನತೆಯಿಂದ ಶಿವತಾಂಡವ ಸ್ತೋತ್ರ ಹಾಡುವ ಜೊತೆಗೆ ಕಟ್ಟುಮಸ್ತಾದ ತನ್ನ ಆಕರ್ಷಕ ವ್ಯಕ್ತಿತ್ವ ಮತ್ತು ಹಾವಭಾವದಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಶ್ರೀ ಕಾಳಿ ಚರಣ್ ಮಹಾರಾಜ್ , ದಕ್ಷಿಣ ಭಾರತದ ತೀರ್ಥಯಾತ್ರೆ ಯಲ್ಲಿ ತೊಡಗಿದ್ದಾರೆ. ಉಡುಪಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ, ಶ್ರೀ ಅನಂತೇಶ್ವರ ಚಂದ್ರಮೌಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಅವರು ಭಾವಪರವಶರಾಗಿ ಶಿವ ತಾಂಡವ ಸ್ತೋತ್ರ ಹಾಡಿದರು.
ಶ್ರೀ ಅನಂತೇಶ್ವರದಲ್ಲಿ ಅವರ ಹಾಡನ್ನು ಕೇಳಿ ಸ್ಥಳದಲ್ಲಿದ್ದ ಭಕ್ತರು ಮಂತ್ರಮುಗ್ಧರಾದರು. ಮಹಾರಾಷ್ಟ್ರ ಮೂಲದವರಾಗಿರುವ ಶ್ರೀ ಕಾಳಿ ಚರಣ್ ಮಹಾರಾಜರು, ಇಂದೋರಿನಲ್ಲಿ ಆಶ್ರಮ ಹೊಂದಿದ್ದಾರೆ. ಗೋ ರಕ್ಷಣೆ ಮತ್ತು ರಾಷ್ಟ್ರ ಕಾರ್ಯಕ್ಕಾಗಿ ತನ್ನ ಜೀವನ ಮುಡಿಪು ಎಂದು ಸ್ವಾಮೀಜಿಯವರು ಘೋಷಿಸಿಕೊಂಡಿದ್ದಾರೆ.
Kshetra Samachara
17/10/2020 08:20 pm