ಉಡುಪಿ: ಅಜ್ಜರಕಾಡಿನ ಪುರಭವನದಲ್ಲಿ ಇಂದು ಉಡುಪಿ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ನಡೆಯಿತು.
ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸಿ ಮಾತನಾಡಿ, "ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಭಾರತದಲ್ಲಿ ಸಾವು ಹೆಚ್ಚಾಗುತ್ತದೆ ಎಂದೇ ಭಾವಿಸಿತ್ತು. ಇಂತಹ ಸಂದರ್ಭ ಮೋದಿ ಅವರಲ್ಲದೆ, ಬೇರೆ ಯಾರೂ ಪ್ರಧಾನಿ ಸ್ಥಾನದಲ್ಲಿ ನಿಂತು ನಿರ್ವಹಿಸಲು ಅಸಾಧ್ಯವಾಗಿರುತ್ತಿತ್ತು. ಪ್ರಧಾನಿಯವರು ಲಾಕ್ ಡೌನ್ ಬಹಳ ದುಃಖದಿಂದಲೇ ಮಾಡಿದ್ದಾರೆ. ಆದರೆ, ಭಾರತದಲ್ಲಿ ಯಾವುದೇ ವಿಷಯ ಮುಚ್ಚಿಡಲು ಸಾಧ್ಯವಿಲ್ಲ. ಪ್ರತಿದಿನ ಕೋವಿಡ್ ಬಗೆಗಿನ ವಿವರ ಆನ್ಲೈನ್ ಮುಖಾಂತರ ಅಪ್ ಡೇಟ್ ಮಾಡಲಾಗುತ್ತದೆ ಎಂದರು.
ವೈದ್ಯಕೀಯ ಸೌಲಭ್ಯ ಒದಗಿಸುವಲ್ಲಿ ಉಡುಪಿ ಸುಸಜ್ಜಿತ ಜಿಲ್ಲೆಯಾಗಿದೆ. ಮೋದಿಯವರು ಲಾಕ್ ಡೌನ್ ಸಮಯ ಹಲವು ಮಹತ್ವದ ನಿರ್ಧಾರ ತೆಗೆದು ಕೊಂಡಿದ್ದರು. ನರೇಂದ್ರ ಮೋದಿಯವರು ಓರ್ವ ರಾಜಕೀಯ ಋಷಿ. ೨೦ ವರ್ಷ ನಿರಂತರ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಯಶಸ್ವಿ ರಾಜಕೀಯದಲ್ಲಿ ಹೆಜ್ಜೆ ಹಾಕಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಟ್ಟಾರು ರತ್ನಾಕರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
10/10/2020 08:36 pm