ಮುಲ್ಕಿ: ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯ ಭಾರತ ಸರಕಾರ ನವದೆಹಲಿ ಡೇ-ನಲ್ಮ್ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಮುಲ್ಕಿ ನಪಂ, ಸ್ವಸಹಾಯ ಸಂಘ, ಪ್ರದೇಶ ಮಟ್ಟದ ಒಕ್ಕೂಟ, ನಗರ ಮಟ್ಟದ ಒಕ್ಕೂಟ ಸದಸ್ಯರ ಸಾಮರ್ಥ್ಯ ವರ್ಧನ ತರಬೇತಿ, ಸ್ವಯಂ ಉದ್ಯೋಗ ಕಾರ್ಯಕ್ರಮ ಉಪಘಟಕದಡಿ ಉದ್ಯಮಶೀಲತಾ ಪ್ರೇರಣಾ ತರಬೇತಿ ಶಿಬಿರ ಮುಲ್ಕಿ ನಪಂ ಸಮುದಾಯ ಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ವಹಿಸಿ ಮಾತನಾಡಿ, ಈ ಕೊರೊನಾ ದಿನಗಳಲ್ಲಿ ಸರಕಾರದ ನಿಯಮ ಪಾಲಿಸಿಕೊಂಡು ಎಲ್ಲಾ ಸಂಘ ಸಂಸ್ಥೆಗಳ ಸೇವಾ ಕರ್ತವ್ಯ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಮುಲ್ಕಿ ನಪಂ ಸದಸ್ಯರಾದ ಪುತ್ತುಬಾವ, ಸತೀಶ್ ಅಂಚನ್, ಯೋಗೀಶ್ ಕೋಟ್ಯಾನ್, ದಯಾವತಿ ಅಂಚನ್, ರಾಧಿಕಾ ಯಾದವ ಕೋಟ್ಯಾನ್, ಆಡಳಿತಾಧಿಕಾರಿ ಮಾಣಿಕ್ಯ ಎನ್., ಮುಖ್ಯಾಧಿಕಾರಿ ಚಂದ್ರಪೂಜಾರಿ, ಆರೋಗ್ಯಾಧಿಕಾರಿ ಲಿಲ್ಲಿ ನಾಯರ್, ಮುಲ್ಕಿ ಮೆಸ್ಕಾಂ ಶಾಖಾಧಿಕಾರಿ ವಿವೇಕಾನಂದ ಶೆಣೈ, ಮುಲ್ಕಿ ಠಾಣಾ ಉಪನಿರೀಕ್ಷಕ ಶೀತಲ್ ಅಲಗೂರು, ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸುನಿಲ್ ಜತ್ತನ್ನ, ಮಾಜಿ ನ.ಪಂ. ಸದಸ್ಯ ಬಶೀರ್ ಕುಳಾಯಿ, ಸಿಬ್ಬಂದಿ ಪ್ರಕಾಶ್ ಕಿಶೋರ್, ಸ್ವಾತಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಡೇ-ನಲ್ಮ್ ಅಭಿಯಾನ ವ್ಯವಸ್ಥಾಪಕರಾದ ಐರಿನ್ ರೆಬೆಲ್ಲೋ, ವಿಶ್ವನಾಥ ರಾವ್, ಆರ್ಥಿಕ ಸಾಕ್ಷರತಾ ಕೇಂದ್ರ ಹಿರಿಯ ಸಮಾಲೋಚಕರಾದ ಲತೇಶ್, ಡೇ-ನಲ್ಮ್ ಸ್ವಸಹಾಯ ಸಂಘದ ಉಪಾಧ್ಯಕ್ಷರಾದ ಸಿಂಧು ಮಾತನಾಡಿದರು. ಮುಲ್ಕಿ ನಪಂ ಸಮುದಾಯ ಸಂಘಟಕರಾದ ಭರತಾಂಜಲಿ ನಿರೂಪಿಸಿದರು.
ಮೂರು ವರ್ಷಗಳಿಂದ ಮೂಲ್ಕಿ ಠಾಣೆಯಲ್ಲಿ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿ, ಸುರತ್ಕಲ್ ದೀಪಕ್ ರಾವ್ ಕೊಲೆ ಪ್ರಕರಣ ಸಹಿತ ಅನೇಕ ಪ್ರಕರಣ ಭೇದಿಸಿ ಕೊರೊನಾ ಲಾಕ್ ಡೌನ್ ದಿನಗಳಲ್ಲಿ ವಾರಿಯರ್ಸ್ ಕರ್ತವ್ಯ ನಿರ್ವಹಿಸಿ ಮಂಗಳೂರಿನ ಪಾಂಡೇಶ್ವರ ಠಾಣೆಗೆ ವರ್ಗಾವಣೆಗೊಂಡ ಮುಲ್ಕಿ ಠಾಣಾ ಉಪನಿರೀಕ್ಷಕ ಶೀತಲ್ ಅಲಗೂರು ಅವರನ್ನು ಗೌರವಿಸಲಾಯಿತು.
Kshetra Samachara
08/10/2020 10:19 am