ಉಳ್ಳಾಲ: ವಿನಾಕಾರಣ ಹಾರ್ನ್ ಹೊಡೆದದ್ದನ್ನ ಪ್ರಶ್ನಿಸಿದ ಮಹಿಳೆಗೆ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಬಿಜೆಪಿಯ ಲೋಕಲ್ ಪುಡಾರಿ ಶೇಖರ ಕಣೀರು ತೋಟ ಎಂಬವನನ್ನ ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕಳೆದ ಭಾನುವಾರ ರಾತ್ರಿ ಕೊಲ್ಯ ಕಣೀರು ತೋಟ ನಿವಾಸಿ ವಿಜಯಲಕ್ಷ್ಮಿ ಅವರು ತಮ್ಮ ಮನೆಯ ಸಾಕು ನಾಯಿಗೆ ಅನ್ನ ಹಾಕುತ್ತಿದ್ದ ವೇಳೆ ಮನೆಯಂಗಳದ ಹೊರಗೆ ಸ್ಕೂಟರಲ್ಲಿ ತೆರಳುತ್ತಿದ್ದ ಶೇಖರ ಎಂಬಾತ ವಿನಾ ಕಾರಣ ಹಾರ್ನ್ ಹೊಡೆದಿದ್ದ .ಅನಗತ್ಯವಾಗಿ ಹಾರ್ನ್ ಏಕೆ ಹೊಡೆಯುತ್ತಿದ್ದೀಯ ಎಂದು ವಿಜಯಲಕ್ಷ್ಮಿ ಅವರು ಶೇಖರನಲ್ಲಿ ಪ್ರಶ್ನಿಸಿದ್ದರಂತೆ. ಈ ವೇಳೆ ವ್ಯಘ್ರನಾದ ಶೇಖರ ತನ್ನ ಸಹವರ್ತಿಗಳಾದ ಸ್ಥಳೀಯ ನಿವಾಸಿ ಪಾಂಡೇಶ್ವರ ಠಾಣಾ ಪೊಲೀಸ್ ಸಿಬ್ಬಂದಿ ನೂತನ್, ಹರೀಶ್, ಯಶ್ ರಾಜ್ ಜೊತೆ ಸೇರಿ ವಿಜಯಲಕ್ಷ್ಮಿಯವರ ಮನೆಗೆ ಅಕ್ರಮ ಪ್ರವೇಶ ಮಾಡಿ ಸಂತ್ರಸ್ತೆಯ ಪತಿ, ಇಬ್ಬರು ಮಕ್ಕಳಿಗೂ ಹಲ್ಲೆ ನಡೆಸಿದ್ದನು.
ಘಟನೆಯಲ್ಲಿ ಕಲ್ಲಿನ ಏಟಿಂದ ಗಾಯಗೊಂಡ ವಿಜಯಲಕ್ಷ್ಮಿ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.ಉಳ್ಳಾಲ ಠಾಣೆಯಲ್ಲಿ ವಿಜಯಲಕ್ಷ್ಮಿ ಅವರು ದೂರು ದಾಖಲಿಸಿದ್ದರು.ಉಳ್ಳಾಲ ಪೊಲೀಸರು ಆರೋಪಿ ಶೇಖರ ಕಣೀರು ತೋಟನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆಗೆ ಕಾರಣನಾಗಿದ್ದ ಮತ್ತೋರ್ವ ಆರೋಪಿ ಪೊಲೀಸ್ ಪೇದೆ ನೂತನ್ ಎಂಬಾತ ಕಣೀರು ತೋಟದಲ್ಲಿ ಖುಲ್ಲಂ,ಖುಲ್ಲ ತಿರುಗುತ್ತಿದ್ದರೂ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ ವಿರುದ್ಧ ವಿಜಯಲಕ್ಷ್ಮಿ ಮತ್ತು ಕುಟುಂಬಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ.
PublicNext
12/10/2022 10:48 pm