ಮಲ್ಪೆ: ಮಲ್ಪೆಯಲ್ಲಿ ಮೀನುಗಾರಿಕೆ ಬೋಟ್ ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಇಂದು ಸಂಭವಿಸಿದೆ.
ಉಡುಪಿ ಜಿಲ್ಲೆಯ ಹೆಜಮಾಡಿಯ ರಮೇಶ್ ಕೋಟ್ಯಾನ್ (75) ಮೃತ ಕಾರ್ಮಿಕ.ಇವರು ಮುಂಜಾನೆ ಎಂದಿನಂತೆ ಗರುಡ ಪರ್ಸಿನ್ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ನೀರಿಗೆ ಬಿದ್ದಿದ್ದಾರೆ. ಘಟನೆ ತಿಳಿದು ಆಪದ್ಭಾಂಧವ ಮುಳುಗು ತಜ್ಞ ಈಶ್ವರ್ ಸ್ಥಳಕ್ಕೆ ಧಾವಿಸಿದಾಗ ಮೀನುಗಾರ ಕಾರ್ಮಿಕ ಮೃತಪಟ್ಟಿದ್ದು, ಶವವನ್ನು ಮೆಲಕ್ಕೆತ್ತಿದ್ದಾರೆ.ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
07/10/2022 12:07 pm