ಸುರತ್ಕಲ್: ಪರಿಸರದ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ನಡೆಸಿ ಸಿಕ್ಕಿಬಿದ್ದಿರುವ ವಂಚಕ ದಂಪತಿ ನಟೋರಿಯಸ್ ಕ್ರಿಮಿನಲ್ ಅಶೋಕ್ ಭಟ್ ಮತ್ತು ಆತನ ಪತ್ನಿ ದಿವ್ಯಾವತಿ ಭಟ್ ಸದ್ಯ ಸೆನ್ ಪೊಲೀಸ್ ಕಸ್ಟಡಿಯಲ್ಲಿದ್ದು ಪ್ರಕರಣದಿಂದ ಪಾರಾಗಲು ಬೇರೆ ಬೇರೆ ಡ್ರಾಮಾ ಮಾಡುತ್ತಿರುವ ವಿಚಾರ ಮಾಧ್ಯಮಕ್ಕೆ ಲಭಿಸಿದೆ.
ಸುರತ್ಕಲ್ ಮತ್ತು ಕಟೀಲಿನಲ್ಲಿ ಭಾರ್ಗವಿ ಫೈನಾನ್ಸ್ ಹೊಂದಿದ್ದ ಅಶೋಕ್ ಭಟ್ ಸುಮಾರು 15 ಕೋಟಿ ರೂಪಾಯಿಗೂ ಅಧಿಕ ವಂಚನೆ ಮಾಡಿದ್ದಾರೆ. ಈ ಬಗ್ಗೆ ದೀಪಕ್ ಶೆಟ್ಟಿ ಎಂಬವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು ಈ ವೇಳೆ ತಾವು ಫಂಡ್ ಇರಿಸಿಯೇ ಇಲ್ಲ, ಬದಲಿಗೆ ಅನೇಕರಿಂದ ಲಕ್ಷಾಂತರ ರೂಪಾಯಿ ಬಡ್ಡಿಗೆ ಹಣ ಪಡೆದಿದ್ದೇವೆ. ಅದಕ್ಕೆ ಬಡ್ಡಿಯನ್ನು ಕೂಡಾ ಪಾವತಿಸಿದ್ದು ಆದರೆ ಅಸಲು ಪಾವತಿಸಲು ಆಗಿಲ್ಲ, ನಮ್ಮ ಬಳಿ ಹಣವಿಲ್ಲ ಎಂದೆಲ್ಲ ನಾಟಕವಾಡುತ್ತಿದ್ದು ಇವರ ನಾಟಕ ನೋಡಿ ಪೊಲೀಸರೇ ಸುಸ್ತಾಗಿದ್ದಾರಂತೆ.
ಅಶೋಕ್ ಭಟ್, ಪತ್ನಿ ವಿದ್ಯಾವತಿ ಭಟ್ ಮತ್ತು ಮಗಳು ಪ್ರಿಯಾಂಕಾ ಭಟ್ ನಡೆಸಿರುವ ವಂಚನೆ ವಿರುದ್ಧ ಹಣ ಕಳೆದುಕೊಂಡಿರುವ ಸಂತ್ರಸ್ತರು ಒಗ್ಗಟ್ಟಾಗಿದ್ದು ಆರೋಪಿ ಫಂಡ್ ಇರಿಸಿದ್ದ ಬಗ್ಗೆ ಮತ್ತು ಹಣ ನೀಡಿದ್ದಕ್ಕೆ ಸಾಕ್ಷ್ಯಗಳನ್ನು ಸಂಗ್ರಹಿಸಿ ಈಗಾಗಲೇ ಸೆನ್ ಪೊಲೀಸರಿಗೆ ನೀಡಿದ್ದು ಆರೋಪಿಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
Kshetra Samachara
28/09/2022 10:41 pm