ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು : ಮನೆಗೆ ನುಗ್ಗಿದ ಕಳ್ಳ,ಸಿಸಿ ಕ್ಯಾಮೆರಾ ಧ್ವಂಸ

ಬಜಪೆ : ಮನೆಗೆ ನುಗ್ಗಿದ ಕಳ್ಳನೊಬ್ಬ ಮನೆಯನ್ನೇಲ್ಲ ಜಾಲಾಡಿ ಕೊನೆಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರನ್ನೇ ಹೊತ್ತೊಯ್ದ ಘಟನೆ ಕಟೀಲು ಸಮೀಪದ ಬಲ್ಲಣ ಎಂಬಲ್ಲಿ ನಡೆದಿದೆ.

ಮನೆಗೆ ನುಗ್ಗಿದ ಕಳ್ಳನ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು,ಮಾಹಿತಿಯನ್ನು ಪಡೆದ ಪೊಲೀಸರು ಅರ್ಧ ಗಂಟೆಯಲ್ಲಿ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಸ್ಥಳೀಯ ನಿವಾಸಿ ಮೆಕ್ಕಿ ಎಂದು ಗುರುತಿಸಲಾಗಿದೆ.

ಕಟೀಲು ಸಮೀಪದ ಬಲ್ಲಣದ ನಿವಾಸಿ ನಿವೃತ್ತ ಶಿಕ್ಷಕಿ ಲೀನಾ ರೆಬೆಲ್ಲೋ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು,ಮನೆಗೆ ನುಗ್ಗಿದ ಕಳ್ಳ ಮನೆ ಮುಂಬಾಗದ ಸಿಸಿ ಕ್ಯಾಮೆರಾ ಒಡೆದು ಹಾಕಿದ್ದಲ್ಲದೆ ಕಬ್ಬಿಣದ ರಾಡ್ ಮೂಲಕ ಮನೆಯ ಕಪಾಟುಗಳನ್ನು ಒಡೆದು ಮನೆಯಲ್ಲಿ ಜಾಲಾಡಿದ್ದಾನೆ.ಜಾಲಾಡಿದ ಕಳ್ಳ ಕೊನೆಗೆ ಮನೆಯ ಗ್ಯಾಸ್ ಸಿಲಿಂಡರನ್ನೇ ಹೊತೊಯ್ದಿದ್ದಾನೆ. ಲೀನಾ ರೆಬೆಲ್ಲೋ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿನ ಮಗಳ ಮನೆಗೆ ಹೋಗಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ.

ಕಳ್ಳತನ ಮಾಡಿದ ಮೆಕ್ಕಿ ಕುಡಿತದ ಚಟ ಹೊಂದಿದ್ದಾನೆ ಎನ್ನಲಾಗಿದೆ. ಬಜಪೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

24/09/2022 03:40 pm

Cinque Terre

7.11 K

Cinque Terre

0

ಸಂಬಂಧಿತ ಸುದ್ದಿ