ಕಟೀಲು: ಸಮೀಪದ ಬಲ್ಲಾಣ ಎಂಬಲ್ಲಿ ಮನೆಗೆ ನುಗ್ಗಿ ಕಳ್ಳತನ ನಡೆದಿದೆ, ಸ್ಥಳೀಯರು ಕಳ್ಳ ಯಾರೆಂಬುದನ್ನು ಮಾಹಿತಿ ನೀಡಿದ್ದು, ಅರ್ಧ ಗಂಟೆ ಒಳಗಡೆ ಕಳ್ಳತನ ಮಾಡಿದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸ್ಥಳೀಯ ನಿವಾಸಿ ಮೆಕ್ಕಿ ಎಂದು ಗುರುತಿಸಲಾಗಿದೆ. ಕಟೀಲು ಸಮೀಪದ ಬಲ್ಲಾಣ ಎಂಬಲ್ಲಿ ನಿವೃತ್ತ ಶಿಕ್ಷಕಿ ಲೀನಾ ರೆಬೆಲ್ಲೋ ಎಂಬುವರ ಮನೆಗೆ ನುಗ್ಗಿದ ಕಳ್ಳ ಮನೆ ಮುಂಬಾಗದ ಸಿಸಿಟಿವಿ ಕ್ಯಾಮೆರಾ ಒಡೆದು ಹಾಕಿದ್ದು, ಕಬ್ಬಿಣದ ರಾಡ್ ಮೂಲಕ ಮನೆಯ ಕಪಾಟುಗಳನ್ನು ಒಡೆದು ಜಾಲಾಡಿದ್ದಾನೆ. ಮನೆಯ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿದ್ದಾನೆ.
ಲೀನಾ ರೆಬೆಲೋ ಇತ್ತೀಚೆಗೆ ಬೆಂಗಳೂರು ಮಗಳ ಮನೆಗೆ ಹೋಗಿದ್ದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಘಟನೆ ನಡೆದಿದೆ. ಕಳ್ಳತನ ಮಾಡಿದ ಮೆಕ್ಕಿ ಕುಡಿತದ ಚಟ ಹೊಂದಿದ್ದಾನೆ ಎನ್ನಲಾಗಿದೆ. ಬಜಪೆ ಪೋಲಿಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Kshetra Samachara
24/09/2022 11:02 am