ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅನ್ಯಕೋಮಿನ ಯುವಕನ ಜೊತೆ ಯುವತಿ ಪತ್ತೆ!!

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಸ್ ರಾವ್ ನಗರ ಪೊಲೀಸ್ ಕ್ವಾರ್ಟರ್ಸ್ ಬಳಿ ಉತ್ತರ ಪ್ರದೇಶದ ಮೂಲದ ಕಟಪಾಡಿಯಲ್ಲಿ ವಾಸ್ತವ್ಯವಿರುವ ಅನ್ಯ ಕೋಮಿನ ಯುವಕನ ಜೊತೆ ಯುವತಿ ಪತ್ತೆಯಾಗಿದ್ದು ಸ್ಥಳೀಯ ಯುವಕರು ಕಾರ್ಯಾಚರಣೆ ನಡೆಸಿ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಟಪಾಡಿಯಲ್ಲಿ ಸೆಲೂನ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಉತ್ತರ ಪ್ರದೇಶ ಮೂಲದ ಯುವಕ ಫಯಿಮ್ ಎಂಬಾತ ತನ್ನ ಮಿತ್ರ ಮುಲ್ಕಿ ಸಮೀಪದ ಕೆಎಸ್ ರಾವ್ ನಗರದಲ್ಲಿ ಸೆಲೂನ್ ಅಂಗಡಿಯಲ್ಲಿದ್ದ ಗುಲ್ಫಾಮ್ ಎಂಬವರ ರೂಮ್ ಗೆ ಬಂದಿದ್ದು ಬಳಿಕ ಕೊಲಕಾಡಿ ಮೂಲದ ಯುವತಿ ಜೊತೆ ಮಾತನಾಡುತ್ತಾ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸ್ಥಳೀಯರಿಗೆ ಸಂಶಯ ಬಂದು ವಿಚಾರಿಸಿದ್ದು ಕೂಡಲೇ ಯುವತಿ ಸ್ಥಳದಿಂದ ಪರಾರಿಯಾಗಿದ್ದಾಳೆ.

ಈ ಸಂದರ್ಭ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದ್ದು ಸ್ಥಳೀಯರು ಆರೋಪಿಗಳಿಗೆ ಗೂಸಾ ಇಕ್ಕಿದ್ದಾರೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರೀಸ್ಥಿತಿ ತಿಳಿಗೊಳಿಸಿ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆರೋಪಿ ಫಯೀಮ್ ಕಡಪಾಡಿಯಲ್ಲಿ ನೆಲೆಸಿದ್ದು ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಈತ ಕಾರ್ನಾಡು ವಿನಲ್ಲಿ ಸೆಲೂನ್ ಅಂಗಡಿ ನಡೆಸುತ್ತಿದ್ದು ಬದಿಯಲ್ಲಿದ್ದ ಫ್ಯಾನ್ಸಿ ಸೆಂಟರ್ ನಲ್ಲಿ ಇದೇ ಯುವತಿ ಕೆಲಸ ಮಾಡುತ್ತಿರುವಾಗ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

ಈ ಘಟನೆಯಿಂದ ಮುಲ್ಕಿ ಪರಿಸರ ಬೂದಿ ಮುಚ್ಚಿದ ಕೆಂಡದಂತಿದ್ದು ಠಾಣೆಯ ಹೊರಬದಿಯಲ್ಲಿ ಸಂಘಟನೆಯ ನಾಯಕರು ಸೇರಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

15/09/2022 08:24 pm

Cinque Terre

10.57 K

Cinque Terre

8

ಸಂಬಂಧಿತ ಸುದ್ದಿ