ಬೈಂದೂರು: ಮಾನಸಿಕವಾಗಿ ನೊಂದು ಬಾವಿಗೆ ಹಾರಿದ ವ್ಯಕ್ತಿಯೊಬ್ಬರಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಜೀವದಾನ ನೀಡಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಈ ಪ್ರಸಂಗ ನಡೆದಿದೆ.
ಇಲ್ಲಿನ ಬೈಂದೂರು ಜೂನಿಯರ್ ಕಾಲೇಜು ಹಿಂಭಾಗದ ಬಾವಿಗೆ ವ್ಯಕ್ತಿಯೊಬ್ಬರು ಹಾರಿ ಆತ್ಮಹತ್ಯೆಗೆ ಯತ್ನಿಸಿದ್ರು. ಬಾವಿಯಲ್ಲಿ ನೀರು ಕಡಿಮೆ ಇದ್ದ ಕಾರಣಕ್ಕೋ ಅಥವಾ ಈ ವ್ಯಕ್ತಿಯ ಆಯಸ್ಸು ಗಟ್ಟಿ ಇದ್ದ ಕಾರಣಕ್ಕೋ ಇವರು ಬದುಕುಳಿದಿದ್ದಾರೆ. ಬಾವಿಗೆ ಹಾರಿದ ವಿಷಯ ಅರಿತ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ, ಸತೀಶ್ ಭಂಡಾರಿ ಎಂಬ ಈ ವ್ಯಕ್ತಿಯನ್ನು ಕಾರ್ಯಾಚರಣೆ ನಡೆಸಿ ಬಚಾವ್ ಮಾಡಿದರು.
ಮಾನಸಿಕವಾಗಿ ಮನನೊಂದು ಇವರು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದ್ದು ಸದ್ಯ ಸಣ್ಣ ಪುಟ್ಡ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Kshetra Samachara
12/09/2022 04:03 pm