ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ ಪೇಟೆಯಲ್ಲಿನ ಗೂಳಿ ಕಾಟಕ್ಕೆ ಸೂಕ್ತ ವ್ಯವಸ್ಥೆಯಾಗಲಿದೆ; ಗುರುನಾಥ್ ಬಿ. ಹಾದಿಮನೆ

ಬ್ರಹ್ಮಾವರ: ಗೂಳಿಯ ತಿವಿತದಿಂದ ಸಾವನ್ನಪ್ಪಿದ ಮಹಿಳೆ ಹಾಗೂ ಇಬ್ಬರು ಗಂಭಿರದ ಕುರಿತು ಬುಧವಾರ ಪಬ್ಲಿಕ್ ನೆಕ್ಸ್ಟ್ ಮಾಡಲಾದ ಸುದ್ದಿಗೆ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ಗುರುನಾಥ್ ಬಿ. ಹಾದಿಮನೆ ಯವರು 3 ಗ್ರಾಮ ಪಂಚಾಯತಿ ಮತ್ತು ಹಿಂದೂ ಸಂಘಟನೆಯವರ ಮೂಲಕ ಶುಕ್ರವಾರ ಠಾಣೆಯಲ್ಲಿ ನಡೆದ ಸಭೆಯಲ್ಲಿ ಪರಿಹಾರ ಕಲ್ಪಿಸಿದ್ದಾರೆ.

ಬ್ರಹ್ಮಾವರ ನಗರ ಭಾಗ 3 ಗ್ರಾಮ ಪಂಚಾಯತಿಗೆ ಒಳಪಟ್ಟಿದ್ದು, ಮಾಜಿ ವಾರಂಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರ ತಾಯಿಯವರು ಗೂಳಿಯ ತಿವಿತದ ಕಾರಣದಿಂದ ಸಾವನ್ನಪ್ಪಿದ್ದು ಇನ್ನು

ಇಬ್ಬರು ಮಹಿಳೆಯರು ತೀರಾ ಗಂಭೀರವಾದರೂ ಸುದ್ದಿಯಾಗದೆ ಇದ್ದಾಗ ಪಬ್ಲಿಕ್ ನೆಕ್ಸ್ಟ್ ಸಾರ್ವಜನಿಕ ಹಿತಾಸಕ್ತಿಯಿಂದ ವರದಿ ಮಾಡಿ ಗಮನಸೆಳೆದಿತ್ತು.

ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಗೂಳಿ ಆದ ಕಾರಣ , ಸಮಸ್ಯೆ ಯಾವ ಇಲಾಖೆಗೂ ಸಂಭಂದ ಇರದಿದ್ದರೂ ಠಾಣಾಧಿಕಾರಿಯವರು ವಿಶೇಷ ಮುತುವರ್ಜಿಯಿಂದ ಸಭೆ ನಡೆಸಿ, ದೇವಸ್ಥಾನದ ಹೊರ ಭಾಗದಲ್ಲಿ 10 ಅಡಿ ಚೌಕದ ಅಳತೆಯ ಶೆಡ್ ಮಾಡಿಸಲು ಕಾರ್ಯನಿರ್ವಣಾಧಿಕಾರಿ ಲಕ್ಷ್ಮೀ ನಾರಾಯಣ ಭಟ್ ರವರಲ್ಲಿ ವಿನಂತಿಸಿದರು. ಗೂಳಿಯನ್ನು ದೇವಸ್ಥಾನದ ಬಳಿಯಲ್ಲಿ ಕಟ್ಟಿ ಸಾಕುವ ವ್ಯವಸ್ಥೆಗೆ ಓರ್ವ ವ್ಯಕ್ತಿಯನ್ನು ನೇಮಿಸಿ ಅವರ ವೇತನವನ್ನು ಬರಿಸುವಂತೆ ಇಲ್ಲಿನ 3 ಗ್ರಾಮ ಪಂಚಾಯತಿಯವರು ಬದ್ಧರಾಗುವಂತೆ ಸೂಚಿಸಿರುವುದಕ್ಕೆ ಎಲ್ಲರೂ ಸಹಮತ ವ್ಯಕ್ತ ಪಡಿಸಿದರು.

ಈ ವೇಳೆ ವಾರಂಬಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಫರಝಾನಾ ,ಹಂದಾಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸತೀಶ್ ನಾಯಕ್ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗವೇಣಿ ಪಂಡರಿನಾಥ್, ಉಪಾಧ್ಯಕ್ಷ ದೇವಾನಂದ ನಾಯಕ್ , ನಿರಂಜನ ಪೂಜಾರಿ ,ಶೋಭಾ ಪೂಜಾರಿ , ಬೇಬಿ ಪೂಜಾರಿ , ನಿತ್ಯಾನಂದ ,ಹಿಂದೂ ಸಂಘಟನೆಯ ರಾಘವೇಂದ್ರ ಕುಂದರ್ ಜೆ.ಬಿ ನಟರಾಜ್ ಉಪಸ್ಥಿತರಿದ್ದರು.

Edited By : Abhishek Kamoji
Kshetra Samachara

Kshetra Samachara

11/09/2022 05:10 pm

Cinque Terre

7.56 K

Cinque Terre

0

ಸಂಬಂಧಿತ ಸುದ್ದಿ