ಕುಂದಾಪುರ: ಇದು ಮರಳಲ್ಲ, ಮೀನಿನ ಕಕ್ಕ! ಗಣಿ ಅಧಿಕಾರಿಗಳು ಪ್ರಮಾಣಿಕರು ಎನ್ನುವ ಹಿನ್ನೆಲೆ ಮಾತುಗಳಿಂದ ವೈರಲ್ ಆಗುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ಸದ್ದು ಮಾಡಿದೆ.
ಹೌದು. ಕಟ್ಟುನಿಟ್ಟಿನ ಕಾನೂನುಗಳ ನಡುವೆಯೂ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ನುಡಿಯುತ್ತಿದೆ. ಆಧುನಿಕ ಯಂತ್ರಗಳನ್ನು ಬಳಸಿ ಟನ್ ಗಟ್ಟಲೆ ಮರಳು ದಂಧೆ ನಡೆಸುವ ಈ ಕಾಯಕ ಇಂದು ನಿನ್ನೆಯದಲ್ಲ.
ಇದು ಮರಳಲ್ಲ ಎನ್ನುತ್ತಲೇ ಮರಳು ರಾಶಿಯನ್ನು ತೋರಿಸುವ ಈ ವಿಡಿಯೋ ಭ್ರಷ್ಟ ಗಣಿ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಮಾಡುತ್ತಿದೆ.
ಅಧಿಕಾರಿಗಳಾದರೋ ಈ ವಿಡಿಯೋ ನೋಡಿದ ಮೇಲಾದರೂ ಎಚ್ಚೆತ್ತುಕೊಳ್ಳುತ್ತಾರೋ ಅಥವಾ ಕರಾವಳಿಯಲ್ಲಿ ಯಾರಾದರೂ ಅಲ್ಪಸ್ವಲ್ಪ ಮರ್ಯಾದೆ ಉಳಿಸಿಕೊಂಡಿರುವ ಜನಪ್ರತಿನಿಧಿಗಳು ಅಧಿಕಾರಿಗಳನ್ನು ನಿದ್ದೆಯಿಂದ ಎಬ್ಬಿಸಿ ಅಕ್ರಮಗಳನ್ನು ತಡೆಯುತ್ತಾರೋ ಅಥವಾ ತಾವೆಲ್ಲರೂ ಈ ಅಕ್ರಮದಲ್ಲಿ ಸಾಬೀತು ಎನ್ನುವುದನ್ನು ಮೌನವಾಗಿಯೇ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.
-ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ
Kshetra Samachara
10/09/2022 09:39 pm