ಬೈಂದೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಸೇವಿಸುತ್ತಿದ್ದ ಐವರ ವಿರುದ್ಧ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಂಗೊಳ್ಳಿ ಠಾಣಿ ಉಪನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ ಅವರು ರೌಂಡ್ಸ್‌ನಲ್ಲಿದ್ದಾಗ ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್ ನಲ್ಲಿ ಕೆಲವರು ಗಾಂಜಾ ಸೇವಿಸುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದು ಸ್ಥಳಕ್ಕೆ ದಾಳಿ ನಡೆಸಿ ಆಕಾಶ್ ಹಳಿಯಾಳ್, ಸ್ನೇಹಿತ್ ಮತ್ತು ಶಿವಪ್ರಸಾದ್ ಎಂಬುವರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಈ ಸಂದರ್ಭ ಅವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಇನ್ನೊಂದು ಪ್ರಕರಣದಲ್ಲಿ ತ್ರಾಸಿ ಬೀಚ್ ಪಕ್ಕ ಗಾಂಜಾ ಸೇವಿಸುತ್ತಿದ್ದ ಮಂಜುನಾಥ, ವಿನೋದ, ಕಾರ್ತಿಕ್, ಮತ್ತು ಪುರುಷೋತ್ತಮ್ ಎಂಬುವರನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ಕಾರ್ತಿಕ್ ಮತ್ತು ಪುರುಷೋತ್ತಮ್ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
Kshetra Samachara
09/09/2022 12:35 pm