ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮನೆಗೆ ನುಗ್ಗಿದ ಕಳ್ಳರಿಂದ 11.50 ಲಕ್ಷ ನಗದು, 4.05 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ!

ಕೋಟ: ಇಲ್ಲಿಗೆ ಸಮೀಪದ ಪಾಂಡೇಶ್ವರದಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು 11.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 4.05 ಲಕ್ಷ ನಗದು ಕಳವು ಮಾಡಿರುವ ಘಟನೆ ನಡೆದಿದೆ.

ಬ್ರಹ್ಮಾವರ ತಾಲೂಕಿನ ಸಾಸ್ತಾನ ನಿವಾಸಿ ರಾಜೇಶ್ ಪೂಜಾರಿ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಉದ್ಯಮಿಯಾಗಿರುವ ರಾಜೇಶ್ ಪೂಜಾರಿ ಅವರು ಮೇ.4 ರಂದು ಮದುವೆ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನಿಂದ ಊರಿಗೆ ಬಂದಿದ್ದು, ಕಾರ್ಯಕ್ರಮ ಮುಗಿಸಿ ವಾಪಾಸು ಬೆಂಗಳೂರಿಗೆ ಹೋಗುವಾಗ ತಮ್ಮ ಹೆಂಡತಿ ಹಾಗೂ ಮಗುವಿನ 11.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಮನೆಯ ರಿಪೇರಿಗಾಗಿ 4,05,000 ರೂ. ನಗದನ್ನು ತಮ್ಮ ಮೂಲಮನೆಯಾದ ಸಾಸ್ತಾನದ ಪಾಂಡೇಶ್ವರದ ಮನೆಯ ಕಪಾಟಿನಲ್ಲಿ ಇಟ್ಟು ಹೋಗಿದ್ದರು.

ಸೆ.7 ಬೆಳಿಗ್ಗೆ ರಾಜೇಶ್ ಪೂಜಾರಿ ಅವರ ಚಿಕ್ಕಪ್ಪ ಸುಬ್ಬಣ್ಣ ಪೂಜಾರಿ ರಾಜೇಶ್ ಪೂಜಾರಿ ಅವರ ಮನೆಯ ಬಳಿ ಬಂದಾಗ ಬಾಗಿಲಿಗೆ ಚಿಲಕ ಹಾಕಿ ಲಾಕ್ ಹಾಕದೇ ಇರುವುದು ಕಂಡು ಬಂದಿದೆ. ಬಳಿಕ ಬಾಗಿಲು ತೆರೆದು ಮನೆಯ ಒಳ ಹೋಗಿದ್ದಾರೆ. ಈ ವೇಳೆ ಮನೆಯ ಕೋಣೆಗಳಲ್ಲಿದ್ದ ಕಪಾಟು ತೆರೆದುಕೊಂಡಿರುವುದು ಕಂಡು ಬಂದಿದ್ದು ಕಳ್ಳತನವಾಗಿದೆ ಎಂಬ ಸಂಶಯದಿಂದ ರಾಜೇಶ್ ಅವರ ತಮ್ಮನಿಗೆ ಮಾಹಿತಿ ನೀಡಿದ್ದರು.

ನಂತರ ಅವರು ಬಂದು ಪರಿಶೀಲಿಸಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ರಾಜೇಶ್ ಪೂಜಾರಿ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Edited By : Abhishek Kamoji
Kshetra Samachara

Kshetra Samachara

08/09/2022 08:15 pm

Cinque Terre

9.19 K

Cinque Terre

1

ಸಂಬಂಧಿತ ಸುದ್ದಿ