ಪುತ್ತೂರು: ಪಾನಮತ್ತ ಪ್ರಯಾಣಿಕರೋರ್ವನ ಮೇಲೆ ಸಾರಿಗೆ ಬಸ್ ನಿರ್ವಾಹಕ ಹಲ್ಲೆ ನಡೆಸಿ ಕಾಲಿನಿಂದ ಒದ್ದು ಬಸ್‌ನಿಂದ ದೂಡಿದ ಘಟನೆ ನಿನ್ನೆ (ಬುಧವಾರ) ಸಂಜೆ ಈಶ್ವರ ಮಂಗಲ ಪೇಟೆಯಲ್ಲಿ ನಡೆದಿದೆ.
ಈಶ್ವರಮಂಗಲದಲ್ಲಿ ಪಡುವನ್ನೂರು ಗ್ರಾಮದ ಪದಡ್ಕದ ನಿವಾಸಿ ಕೃಷ್ಣಪ್ಪ ಎಂಬವರು ಮನೆ ಕಡೆಗೆ ಹೋಗಲು ಬಸ್ ಹತ್ತಿದ್ದಾರೆ. ಆದರೆ ಕೃಷ್ಣಪ್ಪ ಅವರು ಮದ್ಯಪಾನ ಮಾಡಿರುವುದನ್ನು ಗಮನಿಸಿದ ನಿರ್ವಾಹಕ, ಅವರು ಬಸ್ ಹತ್ತುವಾಗಲೇ ಸ್ಟೆಪ್‌ನಲ್ಲಿಯೇ ದೂಡಲು ಯತ್ನಿಸಿದ್ದಾನೆ. ಆದರೆ ಅವರು ಬಸ್ ನಿಂದ ಇಳಿಯಲು ಕೇಳದಿದ್ದಾಗ ಕೈಯಿಂದ ಹಲ್ಲೆ ನಡೆಸಿ ಒದ್ದಿದ್ದಾನೆ. ಪರಿಣಾಮ ಕೃಷ್ಣಪ್ಪ ರಸ್ತೆಗೆ ಬಿದ್ದಿದ್ದಾರೆ. ರಸ್ತೆಗೆ ಬಿದ್ದ ಕೃಷ್ಣಪ್ಪರನ್ನು ನಿರ್ವಾಹಕ ಹಾಗೆ ಬಿಟ್ಟು ತೆರಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ದೃಶ್ಯವನ್ನು ಅಲ್ಲಿಯೇ ಇದ್ದ ಸಾರ್ವಜನಿಕರು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕೃತ್ಯಕ್ಕೆ ಕಾರಣನಾದ ಬಸ್ ನಿರ್ವಾಹಕನನ್ನು ಅಮಾನತುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಲ್ಲದೆ ರೈತ ಸಂಘದ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಸಾರಿಗೆ ಬಸ್‌ನ ಪುತ್ತೂರು ಘಟಕವನ್ನು ಸಂಪರ್ಕಿಸಿ ನಿರ್ವಾಹಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Kshetra Samachara
08/09/2022 12:18 pm