ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಹಿಂದೂ ಯುವ ಸೇನೆ ಪ್ರಮುಖ ಜಯಂತ್ ಎಸ್ .ಕುಂಪಲ ನೇಣು ಬಿಗಿದು ಆತ್ಮಹತ್ಯೆ.

ಉಳ್ಳಾಲ: ಒಂದು ಕಾಲದಲ್ಲಿ ಹಿಂದೂ ಯುವ ಸೇನೆಯಲ್ಲಿ‌ ಪ್ರಭಾವಿ ಮುಖಂಡರಾಗಿ ಗುರುತಿಸಿಕೊಂಡಿದ್ದ ಜಯಂತ್ ಎಸ್.ಕುಂಪಲ ಅವರು ನೇಣು ಬಿಗಿದು ಆತ್ಮ ಹತ್ಯೆಗೆ ಶರಣಾಗಿದ್ದಾರೆ.

ಕುಂಪಲದ ಕೃಷ್ಣನಗರ ಎರಡನೇ ಅಡ್ಡ ರಸ್ತೆಯ ಬಾಡಿಗೆ ನಿವಾಸದಲ್ಲಿ ಯಾರೂ ಇಲ್ಲದ ವೇಳೆ ಜಯಂತ್ (49)ಅವರು ಇಂದು ಮದ್ಯಾಹ್ನದ ನಂತರ ಆತ್ಮ ಹತ್ಯೆಗೈದಿದ್ದು, ಅವರ ಪತ್ನಿ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಜಯಂತ್ ಅವರು ಬಾಡಿಗೆ ಮನೆಯ ಹಾಲಲ್ಲೇ ಚೂಡಿದಾರದ ಶಾಲಲ್ಲಿ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾರೆ.

ಜಯಂತ್ ಅವರು ಸಕ್ರಿಯ ಹಿಂದೂ ಕಾರ್ಯಕರ್ತರಾಗಿದ್ದು ಹಣ ಕಾಸಿನ ಮುಗ್ಗಟ್ಟಿನ ನಂತರ ತೊಕ್ಕೊಟ್ಟಲ್ಲಿ ರಿಕ್ಷಾ ಚಲಾಯಿಸುತ್ತಿದ್ದರು.ನಿನ್ನೆ ಮಂಗಳೂರಿನ ಬಂಗ್ರ ಕೂಳೂರಲ್ಲಿ ನಡೆದ ಪ್ರದಾನಿ ಮೋದಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಜನ ನಿಬೀಡ ಪ್ರದೇಶದಲ್ಲಿ ತನ್ನ ಸ್ಮಾರ್ಟ್ ಫೋನನ್ನ ಕಳಕೊಂಡಿದ್ದು ಈ ಬಗ್ಗೆ ಇಂದು ಮದ್ಯಾಹ್ನದವರೆಗೂ ಅನೇಕ ಸ್ನೇಹಿತರಲ್ಲಿ ಹೇಳಿಕೊಂಡಿದ್ದರಂತೆ.

ಮೃತ ಜಯಂತ್ ಅವರು ಕುಂಪಲ ,ಹನುಮಾನ್ ನಗರದ ವೀರಾಂಜನೇಯ ವ್ಯಾಯಾಮ ಶಾಲೆಯ ಬಳಿಯ ತನ್ನ ಜಾಗದಲ್ಲಿ ನೂತನ ಗೃಹ ನಿರ್ಮಾಣ ಮಾಡುತ್ತಿದ್ದು ನಿರ್ಮಾಣ ಕಾಮಗಾರಿ ಸಂಪೂರ್ಣಗೊಳ್ಳುತ್ತಿದ್ದ ವೇಳೆಯೇ ಅವರು ಆತ್ಮ ಹತ್ಯೆಗೈದ ವಿಚಾರ ಅವರ ಪತ್ನಿ ,ಇಬ್ಬರು ಗಂಡು ಮಕ್ಕಳನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ. ಉಳ್ಳಾಲ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.

Edited By : Nagaraj Tulugeri
PublicNext

PublicNext

03/09/2022 09:11 pm

Cinque Terre

28.65 K

Cinque Terre

2

ಸಂಬಂಧಿತ ಸುದ್ದಿ