ಬ್ರಹ್ಮಾವರ: ಪತಿಯ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಷಾ(31) ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ಉಷಾರನ್ನು 11ವರ್ಷಗಳ ಹಿಂದೆ ಚಂದ್ರಹಾಂಡ ಎಂಬವರೊಂದಿಗೆ ಮದುವೆಯಾಗಿದ್ದು, ಒಂದು ಗಂಡು ಮಗುವಿದೆ. ಮದುವೆಯ ಬಳಿಕ ಬೆಂಗಳೂರಿನಲ್ಲಿದ್ದ ದಂಪತಿ, ಎಂಟು ತಿಂಗಳಿನಿಂದ ಹೇರೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ. ಇಬ್ಬರೂ ಪೇತ್ರಿಯ ಗಾರ್ಮಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಮನೆಯಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿದ್ದು, 30ರಂದು ಸಂಜೆ ಸಹ ಗಲಾಟೆಯಾಗಿದ್ದು ಬಳಿಕ ಉಷಾ ಅವರು ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು. 31ರಂದು ಬೆಳಗ್ಗೆ ರೂಮಿನ ಕಿಟಿಕಿ ಮೂಲಕ ನೋಡಿದಾಗ ಉಷಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಉಷಾರ ಸಾವಿಗೆ ಆಕೆಯ ಗಂಡನ ಕಿರುಕುಳ ಹಾಗೂ ದುಷ್ಟೇರಣೆ ಕಾರಣ ಎಂದು ಉಷಾರ ಅಣ್ಣ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
02/09/2022 09:04 am