ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿದ್ಯಾರ್ಥಿಗಳನ್ನು ಅಪಹರಿಸಿ ದರೋಡೆ ಮಾಡಿದ ನಾಲ್ವರ ಬಂಧನ

ಉಡುಪಿ: ನಗರದ ಕಲ್ಸಂಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಬಂದ ತಂಡವೊಂದು ಅಪಹರಣ ಮಾಡಿ, ಹಲ್ಲೆ ನಡೆಸಿ ದರೋಡೆ ಮಾಡಿದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಜಕರಿಯಾ, ರಜೀಂ, ಖಾಲೀದ್, ರೆಹಮಾನ್ ಎಂಬ ನಾಲ್ವರು ಆರೋಪಿಗಳನ್ನು ಉಡುಪಿ ನಗರ ಠಾಣಾ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಮಣಿಪಾಲದ ಉಡುಪಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುವ ವಿದ್ಯಾರ್ಥಿಗಳಾದ ಬ್ರಿಟಿಲ್ ಬಿಜು ಮತ್ತು ಮಹಮ್ಮದ್ ಸಿನಾನ್ ಕರಾವಳಿ ಬೈಪಾಸ್ ಬಳಿಯಿರುವ ಮಣಿಪಾಲ್ ಇನ್ ಹೋಟೆಲಿನಲ್ಲಿ ಕ್ಯಾಟರಿಂಗ್ ಕೆಲಸ ಮುಗಿಸಿ ಮಣಿಪಾಲದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಲ್ಸಂಕ ಜಂಕ್ಷನ್ ಬಳಿ ಕರಾವಳಿ ಬೈಪಾಸ್ ಕಡೆಯಿಂದ ಬಂದ ಕಾರನ್ನು ಕೈ ತೋರಿಸಿ ಡ್ರಾಪ್ ಕೇಳಿದ್ದಾರೆ.

ಅರೋಪಿಗಳು ಕಾರನ್ನು ನಿಲ್ಲಿಸಿದ್ದು, ಚಾಲಕನು ಸೇರಿ ಕಾರಿನಲ್ಲಿ ನಾಲ್ವರಿದ್ದರು. ಕಾರಿನೊಳಗಿಂದ ಬಂದ ವಾಸನೆಯನ್ನು ಗಮನಿಸಿ ಕಾರಿನಲ್ಲಿ ತೆರಳಲು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ. ಆಗ ಕಾರಿನಲ್ಲಿದ್ದ ಒಬ್ಬ ಇಳಿದು ಚೂರಿಯನ್ನು ತೋರಿಸಿ, ಕಾರಿನಲ್ಲಿ ಕುಳಿತುಕೊಳ್ಳದೇ ಇದ್ದರೆ ಕೊಲ್ಲುವುದಾಗಿ ಬೆದರಿಸಿ, ವಿದ್ಯಾರ್ಥಿಗಳಿಬ್ಬರನ್ನು ಅಪಹರಣ ಮಾಡಿದ್ದಾರೆ.

ನಂತರ ಇವರ ಮೊಬೈಲ್ ಕಿತ್ತುಕೊಂಡು ದೊಡ್ಡಣಗುಡ್ಡೆಯ ಪಾರ್ಕ್ ನಲ್ಲಿ ಇಬ್ಬರಿಗೆ ಹಲ್ಲೆ ನಡೆಸಿ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಒಬ್ಬಾತ ತಪ್ಪಿಸಿಕೊಂಡು ಬಂದು ಠಾಣೆಯಲ್ಲಿ ದೂರು ನೀಡಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿಯನ್ನು ಕಾಪು, ಶಿರ್ವದಲ್ಲಿ ಸುತ್ತಾಡಿಸಿ ಕಾರಿನಲ್ಲೇ ಹಲ್ಲೆ ನಡೆಸಿದ್ದಾರೆ. ಶಿರ್ವ ಬಳಿ ಪೋಲಿಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
PublicNext

PublicNext

01/09/2022 07:31 pm

Cinque Terre

29.98 K

Cinque Terre

4

ಸಂಬಂಧಿತ ಸುದ್ದಿ