ಕಾರ್ಕಳ : ಅನಂತಶಯನ ಗೋಮಟಬೆಟ್ಟ ಚತುರ್ಮುಖ ಬಸದಿ ಪ್ರದೇಶಗಳು ಐತಿಹಾಸಿಕ ತಾಣಗಳಾಗಿದ್ದು ಪುರಾತತ್ವ ಇಲಾಖೆಯ ಅಧೀನಕೊಳಪಟ್ಟಿವೆ.
ನಿರ್ಬಂಧಿತ ಪ್ರದೇಶಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿಲ್ಲ ಆದರೆ ಕಾರ್ಕಳದಲ್ಲಿ ಪುರಾತತ್ವ ಇಲಾಖೆಯ ಆದೇಶವನ್ನೇ ಉಲ್ಲಂಘಿಸಿ ಅನಂತಶಯನದ ಅನಂತಪದ್ಮನಾಭ ದೇವಸ್ಥಾನದ 20 ಮೀಟರ್ ಅಂತರದಲ್ಲಿ ಅಕ್ರಮ ಕಟ್ಟಡ ಒಂದು ನಿರ್ಮಾಣವಾಗುತ್ತಿದೆ.
ಕಾರ್ಕಳದ ಶೈಲಾ ಪೈ ಹಾಗೂ ನಿತ್ಯಾನಂದ ಪೈ ಜಂಟೀ ಮಾಲೀಕತ್ವದಲ್ಲಿ ಪುರಾತತ್ವ ಇಲಾಖೆ ಹಾಗೂ ಪುರಸಭೆಯ ಅನುಮತಿಯನ್ನೇ ಪಡೆಯದೇ ಅಕ್ರಮವಾಗಿ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುತ್ತಿದೆ. ಈಗಾಗಲೇ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡಕ್ಕೆ ಅಡಿಪಾಯವನ್ನು ಹಾಕಲಾಗಿದ್ದು ಇದಕ್ಕೆ ಪುರಸಭೆ ಹಾಗೂ ಪುರತತ್ವ ಇಲಾಖೆಯಿಂದ ಯಾವುದೇ ರೀತಿಯ ಅನುಮತಿ ಪಡೆದಿಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪುರಾತತ್ವ ಇಲಾಖೆಯು ಕೆಲವು ಷರತ್ತಿನೊಂದಿಗೆ ಹಳೆಯ ಕಟ್ಟಡ ದುರಸ್ತಿಗೆ ಮಾತ್ರ ಅನುಮತಿ ನೀಡುತ್ತದೆಯೇ ಹೊರತಾಗಿ ನಿಷೇಧಿತ ವಲಯದಲ್ಲಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಯಾವುದೇ ರೀತಿಯ ಅನುಮತಿ ನೀಡುವುದಿಲ್ಲ ಆದರೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿದ್ದರೂ ಅಧಿಕಾರಿಗಳು ಮಾತ್ರ ನಿದ್ದೆಯಲ್ಲಿದ್ದಾರೆ.
ಅಕ್ರಮ ನಡೆಯುತ್ತಿದ್ದರೂ ಪುರಸಭೆ ಹಾಗೂ ಪುರಾತತ್ವ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಸೋಮನಾಥ ನಾಯಕ್ ಪುರಸಭಾ ಸದಸ್ಯರು ಅನಂತಶಯನದ ಅನಂತಪದ್ಮನಾಭ ದೇವುಳವು ಪುರತತ್ವ ಇಲಾಖೆಯ ಅಧೀನ ಕೊಳಪಟ್ಟಿದ್ದು ಇದರ ಪಕ್ಕದಲ್ಲಿ ನಿಯಮ ಬಹಿರವಾಗಿ ಕಟ್ಟಡ ಕಾಮಗಾರಿ ನಡೆಯುತ್ತಿದೆ ಇದನ್ನು ಪ್ರಶ್ನಿಸಬೇಕಿದ್ದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದು ಅಕ್ರಮಕ್ಕೆ ಅಧಿಕಾರಿಗಳು ಬೆಂಬಲಿಸುವಂತಿದೆ ಎಂದು ಸೋಮನಾಥ್ ನಾಯಕ್ ಆರೋಪಿಸಿದ್ದಾರೆ.
ಕಟ್ಟಡ ಕಾಮಗಾರಿಗೆ ಅವಕಾಶವಿಲ್ಲ: ಗೋಕುಲ್ ಪ್ರವೀಣ್ ಪುರತತ್ವ ಸಂರಕ್ಷಣಾ ಸಹಾಯಕ ಕಾರ್ಕಳ ಈಗಾಗಲೇ ನಿರ್ಮಾಣ ಹಂತದ ಕಾಮ ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಹಲವು ಬಾರಿ ನೋಟಿಸ್ ನೀಡಿದರು ಅವರು ಕಾಮಗಾರಿ ಮುಂದುವರಿಸಿದ್ದಾರೆ ಈ ಕುರಿತು ಈಗಾಗಲೇ ಬೆಂಗಳೂರಿನ ಪುರತತ್ವ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಅನಧಿಕೃತ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ನೋಟಿಸ್ ನೀಡಲಾಗಿದೆ. ರೂಪ ಶೆಟ್ಟಿ, ಮುಖ್ಯ ಅಧಿಕಾರಿ ಪುರಸಭೆ ಕಾರ್ಕಳ ಅನಂತಶಯನದ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ ಪುರಸಭೆಯ ಜೊತೆಗೆ ಪುರಾತತ್ವ ಇಲಾಖೆಯು ಕೂಡ ಕ್ರಮಕ್ಕೆ ಮುಂದಾಗಬೇಕು ಪ್ರಮುಖವಾಗಿ ಇದು ಪುರಾತತ್ವ ಇಲಾಖೆಯ ಆ ದಿನಕ್ಕೆ ಒಳಪಟ್ಟಿದ್ದು ಅಕ್ರಮ ಕಟ್ಟಡ ಕಾಮಗಾರಿ ನಿಲ್ಲಿಸಲು ಪುರಾತತ್ವ ಇಲಾಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಮುಖ್ಯಾಧಿಕಾರಿ ರೂಪ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಕಾರ್ಕಳದಲ್ಲಿ ರಾಜಾರೋಷವಾಗಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದರೂ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದು ಇದರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಇನ್ನಾದರೂ ಈ ಅಕ್ರಮಕ್ಕೆ ಬ್ರೇಕ್ ಬೀಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
Kshetra Samachara
25/08/2022 07:14 pm