ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಜಾ ಗಲಾಟೆ ತಲಾವಾರು ದಾಳಿ : ಯುವಕನ ಸ್ಥಿತಿ ಗಂಭೀರ

ಮಂಗಳೂರು:ಯುವಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಹೊರವಲಯದ ವಳಚ್ಚಿಲ್ ಎಂಬಲ್ಲಿ ನಡೆದಿದೆ. ಯುವಕನ ಸ್ಥಿತಿ ಚಿಂತಾಜನಕವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮನೆಗೆ ಸಾಮಾನು ತರಲು ಅಂಗಡಿಗೆ ತೆರಳಿದ್ದ ಮಿಫ್ತಾಹ್ ಎಂಬ ಬಾಲಕನನ್ನು ತಡೆದಿದ್ದ ಗ್ಯಾಂಗ್ ವೊಂದು ಮಾರಕಾಸ್ರ್ತಗಳಿಂದ ಹಲ್ಲೆ ನಡೆಸಲು ಯತ್ನಿಸುತ್ತಿದ್ದ ಸಂದರ್ಭ ತಡೆಯಲು ಬಂದ ಯುವಕನ ಮಾವ ಆಸೀಫ್ ಎಂಬುವವರ ಮೇಲೆ ತಂಡ ಏಕಾಏಕಿ ತಲವಾರು ಹಾಗೂ ಇನ್ನಿತರ ಮಾರಕಾಸ್ರ್ತಗಳಿಂದ ದಾಳಿ ನಡೆಸಿದೆ.

ಈ ಘಟನೆಯಲ್ಲಿ ಆಸೀಫ್ ಗಂಭೀರ ಗಾಯಗೊಂಡಿದ್ದು ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಿಸ್ತಾ, ಮನ್ಸೂರು ಯಾನೆ ಹುಸೈನ್ ಹಾಗೂ ಆಶಿಕ್ ಪ್ರಮುಖ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿ ಆಶಿಕ್ ಎಂಬವನನ್ನು ಬಂಧಿಸಲಾಗಿದೆ.

Edited By : Nirmala Aralikatti
PublicNext

PublicNext

20/08/2022 03:13 pm

Cinque Terre

23.14 K

Cinque Terre

5

ಸಂಬಂಧಿತ ಸುದ್ದಿ