ಬೈಂದೂರು: ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರ ಬಗ್ಗೆ ಫೇಸ್ ಬುಕ್ ನಲ್ಲಿ ಮಾನಹಾನಿಕರವಾಗಿ ಕಾಮೆಂಟ್ ಹಾಕಿದವರ ವಿರುದ್ಧ ಇಲ್ಲಿನ ಡಿವೈಎಸ್ ಪಿ ಹಾಗೂ ಸೆನ್ ಠಾಣೆಗೆ ದೂರು ನೀಡಲಾಗಿದೆ.
ಅಮರನಾಥ ಶ್ರೀಯಾನ್ ಎಂಬವರ ಹೆಸರಿನಲ್ಲಿದ್ದ ಖಾತೆಯಲ್ಲಿ ಶಾಸಕರ ವಿರುದ್ಧ ಅವಹೇಳನಕಾರಿಯಾಗಿ ಬರೆಯಲಾಗಿತ್ತು. ಶಾಸಕರ ಹೆಸರು ಕೆಡಿಸುವ ಉದ್ದೇಶದಿಂದ ಇಂತಹ ಪೋಸ್ಟ್ ಹಾಕಲಾಗಿದ್ದು, ಇದಕ್ಕೆ ಕಾಮೆಂಟ್ ಮಾಡಿದ ಸ್ವರ್ಣರಾಜ್ ಶೆಟ್ಟಿ ಚಿಂತನ್ ದೇವಾಡಿಗ, ಕರುಣಾಕರ ಖಾರ್ವಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
Kshetra Samachara
20/08/2022 08:21 am