ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಟ್ಟಿಗೆ ನುಗ್ಗಿ ದನ ಕಳವುಗೈದ ಐವರು ಆರೋಪಿಗಳು ಅರೆಸ್ಟ್

ಮಂಗಳೂರು: ನಗರದ ಬಜಾಲ್ ಗ್ರಾಮದ ಅಶ್ವಿನ್ ಎಂಬವರ ಮನೆಯ ಹಟ್ಟಿಗೆ ನುಗ್ಗಿ ದನಗಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣಾ ಪೊಲೀಸರು ಐವರು ಆರೋಪಿಗಳನ್ನು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.

ಗುರುನಗರ, ಬಂಗ್ಲಗುಡ್ಡೆ, ಕೊಟ್ಟಾರಿ ಗುಡ್ಡೆ ನಿವಾಸಿ ಮಹಮ್ಮದ್ ಅಶ್ಫಕ್ (22), ಗುರುಪುರ, ಅಡ್ಡೂರು ನಿವಾಸಿ ಅಝರುದ್ದೀನ್(31), ಜಲ್ಲಿಗುಡ್ಡೆ , ಬಜಾಲ್ ಪಡ್ಪು ನಿವಾಸಿ ಸುಹೈಲ್(19), ಬಜಾಲ್ ಪಕ್ಕಲಡ್ಕ ನಿವಾಸಿ ಮೊಹಮ್ಮದ್ ಅಫ್ರೀನ್(25), ಬಜಾಲ್, ಕಟ್ಟಪುಣಿ ನಿವಾಸಿ ಶಾಹೀದ್(19) ಬಂಧಿತ ಆರೋಪಿಗಳು.

ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಬಜಾಲ್ ಗ್ರಾಮದ ನಿವಾಸಿ ಅಶ್ವಿನ್ ಎಂಬವರು ದನಕರುಗಳನ್ನು ಸಾಕಿಕೊಂಡಿದ್ದರು. ಜುಲೈ 20ರಂದು ಸಂಜೆ ಎಂದಿನಂತೆ ದನಗಳನ್ನು ಅವರು ಹಟ್ಟಿಯಲ್ಲಿ ಕಟ್ಟಿ ಹಾಕಿದ್ದರು. ಆದರೆ ಜು. 21ರ ನಸುಕಿನ ವೇಳೆ 3.30ರ ವೇಳೆಗೆ ಹಟ್ಟಿಯಲ್ಲಿ ದನಗಳು ಕೂಗುವುದು ಕೇಳಿ ಬಂದಿದೆ. ತಕ್ಷಣ ಅಶ್ವಿನ್ ಅವರು ಹೊರಗೆ ಬಂದಾಗ ಹಟ್ಟಿಯಲ್ಲಿದ್ದ ಒಂದು ದನ ಹೊರಗೆ ನಿಂತಿತ್ತು. ಮತ್ತೊಂದು ಹಸು ಕಳುವಾಗಿತ್ತು. ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ದನ ನಾಪತ್ತೆಯಾಗಿತ್ತು. ಈ ಬಗ್ಗೆ ಕಂಕನಾಡಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿರುವ ಮಾರುತಿ ಕಾರು, ಕತ್ತಿ, ಹಗ್ಗಗಳನ್ನು ಸ್ವಾಧೀನ ಪಡಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

16/08/2022 07:59 pm

Cinque Terre

8.38 K

Cinque Terre

3

ಸಂಬಂಧಿತ ಸುದ್ದಿ