ಮುಲ್ಕಿ: ಸ್ಕೂಟರ್‌ನಲ್ಲಿ ಅಕ್ರಮವಾಗಿ ಮಧ್ಯ ಸಾಗಿಸುತ್ತಿದ್ದ ಮೂವರು ಯುವಕರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಹಳೆಯಂಗಡಿ ಜಂಕ್ಷನ್‌ನಲ್ಲಿ ಯುವಕರು ಶನಿವಾರ ಮಧ್ಯಾಹ್ನ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದರು. ಈ ವೇಳೆ ರೌಂಡ್ಸ್‌ನಲ್ಲಿದ್ದ ಮುಲ್ಕಿ ಪೊಲೀಸ್ ಉಪ ನಿರೀಕ್ಷಕ ಮಾರುತಿ ಪಿ ಹಾಗೂ ಸಿಬ್ಬಂದಿಗೆ ಯುವಕರು ಸಿಕ್ಕಿಬಿದ್ದಿದ್ದಾರೆ.
ಯುವಕರು ಹಳೆಯಂಗಡಿ ಜಂಕ್ಷನ್ ಬಳಿ ಆಕ್ಟಿವಾ ಸ್ಕೂಟರ್ ನಂಬರ್ ಕೆಎ-19 ಎಚ್‌ಬಿ 4249ರಲ್ಲಿ ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಎಂಬ ಹೆಸರಿನ 90 ಎಂ.ಎಲ್. ಮದ್ಯ ತುಂಬಿದ ಸ್ಯಾಚೆಟ್ ಗಳು 48 ಮತ್ತು ಒಲ್ಡ್ ಟ್ಯಾವರಿನ್ ಎಂಬ ಹೆಸರಿನ 90 ಎಂ.ಎಲ್. ಮದ್ಯ ತುಂಬಿದ ಸ್ಯಾಚೆಟ್ ಗಳು 31 ಪೌಚ್‌ಗಳನ್ನು ಮುಲ್ಕಿ ಕಡೆಯಿಂದ ಸುರತ್ಕಲ್ ಕಡೆಗೆ ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
07/08/2022 09:06 am